ಬೆಂಗಳೂರು:- ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್ 34ನೇ ವರ್ಷಕ್ಕೆ ಜಾಂಡೀಸ್‌ನಿಂದ ನಿಧನರಾಗಿದ್ದಾರೆ. ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ಆನೇಕಲ್ ಬಾಲರಾಜ್‌ರನ್ನು ಕಳೆದುಕೊಂಡಿದ್ದ ಕುಟುಂಬ ಈಗ ಎದೆಯೆತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದೆ. ಇಂದು ಸಂತೋಷ್ ಬಾಲರಾಜ್ ಪಾರ್ಥಿವದ ಅಂತ್ಯಸಂಸ್ಕಾರ ಸ್ವಗ್ರಾಮದಲ್ಲಿ ನೆರವೇರಿದೆ.
ಆನೇಕಲ್ ಪಟ್ಟಣದ ಚಿಕ್ಕ ಕೆರೆ ಬಳಿ ಸಂತ ವನಚಿನ್ನಪ್ಪವರ ಪುಣ್ಯ ಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಲಾಗಿತ್ತು. ಫಾದರ್ ಶಾಂತ ರಾಜು ಥಾಮಸ್ ಅವರಿಂದ ಅಂತಿಮ ಪ್ರಾರ್ಥನೆ ಸಲ್ಲಿಕೆ ಮಾಡಲಾಯಿತು. ಕೊನೆಗೆ ಕ್ರೈಸ್ತ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ಮಾಡಲಾಗಿದೆ. ಕುಟುಂಬಸ್ಥರು, ಆಪ್ತರು ಸೇರಿದಂತೆ ಹಲವಾರು ಜನ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು. ತಂದೆ ಸಮಾಧಿ ಬಳಿಯೇ ಸಂತೋಷ್ ಬಾಲರಾಜ್ ಪಾರ್ಥಿವ ಸಮಾಧಿ ಮಾಡಲಾಗಿದೆ.
ತಂದೆಯ ಸಾವಿನ ಬಳಿಕ ಸಂತೋಷ್ ಬಾಲರಾಜ್ ಕೂಡ ಸಾಕಷ್ಟು ಕುಗ್ಗಿಹೋಗಿದ್ದರು. ಆದರೆ, ಮೂರು ವರ್ಷಗಳ ಅಂತರದಲ್ಲಿ ಮನೆಯ ಆಧಾರವಾಗಿದ್ದ ಗಂಡ ಹಾಗೂ ಮಗನನ್ನು ಕಳೆದುಕೊಂಡು ಸಂತೋಷ್ ಬಾಲರಾಜ್ ಅವರ ತಾಯಿ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
ಸಂತೋಷ್ ಬಾಲರಾಜ್‌ಗೆ ಜಾಂಡೀಸ್ ಇಡೀ ಮೈಗೆಲ್ಲಾ ಹರಡಿತ್ತು. ಇದಕ್ಕಾಗಿ ವಾರದ ಹಿಂದೆಯಷ್ಟೇ ಅವರನ್ನು ಸಾಗರ್ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವು ಕಂಡಿದ್ದರು. ಜಾಂಡೀಸ್‌ನ ಲಕ್ಷಣ ಪ್ರಮುಖ ಅಂಗಕ್ಕೆ ಹರಡಿದ ಕಾರಣ ಅವರು ಕೋಮಾಕ್ಕೆ ಜಾರಿದ್ದರು.
ಜಾಂಡೀಸ್‌ನ ಲಕ್ಷಣಗಳು: ರಕ್ತದಲ್ಲಿ ಬಿಲಿರುಬಿನ್ ಎಂಬ ಅಂಶದ ಮಟ್ಟ ಹೆಚ್ಚಾದಾಗ ಕಾಮಾಲೆ (Jaundice) ಉಂಟಾಗುತ್ತದೆ. ಕೆಂಪು ರಕ್ತ ಕಣಗಳು ಸ್ವಾಭಾವಿಕವಾಗಿ ಒಡೆದಾಗ ಬಿಲಿರುಬಿನ್ ಉತ್ಪತ್ತಿಯಾಗುತ್ತದೆ. ಸಾಮಾನ್ಯವಾಗಿ, ಯಕೃತ್ತು (liver) ಈ ಬಿಲಿರುಬಿನ್ ಅನ್ನು ಸಂಸ್ಕರಿಸಿ ಪಿತ್ತರಸದ ಮೂಲಕ ಕರುಳಿಗೆ ಕಳುಹಿಸುತ್ತದೆ, ಅಲ್ಲಿ ಅದು ಮಲದ ಮೂಲಕ ದೇಹದಿಂದ ಹೊರಹೋಗುತ್ತದೆ.
Leave feedback about this