ವಿಜಯನಗರ:- ಬಹಳಷ್ಟು ಶಾಸಕರು ತಮ್ಮ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ದೂರಲಾರಂಭಿಸಿದ್ದಾರೆ. ಗವಿಯಪ್ಪ, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಹಲವು ಶಾಸಕರೊಂದಿಗೆ ಸುರ್ಜೇವಾಲಾ ಗಂಭೀರ ಸಮಾಲೋಚನೆ ನಡೆಸಿದ್ದಾರೆ.
ವಿಜಯನಗರ ಕ್ಷೇತ್ರದ ಶಾಸಕ ಗವಿಯಪ್ಪರನ್ನು ಎರಡೆರಡು ಬಾರಿ ಕರೆಸಿಕೊಂಡು ಮಾತುಕತೆ ನಡೆಸಿದ್ದು, ಮಾಡಿದ ಆರೋಪಕ್ಕೆ ತಕ್ಕಂತೆ ದಾಖಲೆಗಳೊಂದಿಗೆ ಮತ್ತೊಮ್ಮೆ ಬಂದು ಭೇಟಿ ಮಾಡಲು ಸೂಚಿಸಿದ್ದರು.
ಆದ್ದರಿಂದ ಗವಿಯಪ್ಪ ಪಕ್ಕಾ ದಾಖಲೆ ಕೊಟ್ಟಿದ್ದಾರೆ. ಗವಿಯಪ್ಪ ಭೇಟಿಯ ಬೆನ್ನಲ್ಲೇ ಬಳ್ಳಾರಿ ಶಾಸಕ ಬಿ.ನಾಗೇಂದ್ರರನ್ನೂ ಕರೆಸಿಕೊಂಡು ಸುರ್ಜೇವಾಲಾ ಚರ್ಚೆ ಮಾಡಿರುವುದು ಗಮನ ಸೆಳೆದಿದೆ.
ಒಂದು ಬಾರಿ ಹೊಸಪೇಟೆ ಶಾಸಕ ಗವಿಯಪ್ಪ ಜೊತೆಗೆ ಮಾತುಕತೆ ನಡೆಸಿದ್ದ ಸುರ್ಜೇವಾಲ ಮತ್ತೆ ಕೂಡ ಬುಲಾವ್ ನೀಡಿದ್ದರು. ವಸತಿ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಮಾಜಿ ಸಚಿವ ನಾಗೇಂದ್ರ ವಿರುದ್ಧದ ದೂರಿಗೆ ಗವಿಯಪ್ಪ ದಾಖಲೆ ಒದಗಿಸಿದ್ದಾರೆ.
ಜುಲೈ 8 ರಂದು ಎರಡು ಬಾರಿ ಸುರ್ಜೇವಾಲರನ್ನು ಭೇಟಿಯಾಗಿದ್ದ ಗವಿಯಪ್ಪ ಕೆಲವು ದಾಖಲೆಗಳನ್ನು ನೀಡಿದ್ದರು. ಮತ್ತೆ ಜಮೀರ್ ಹಾಗೂ ನಾಗೇಂದ್ರ ವಿರುದ್ಧ ದೂರು ನೀಡಿದ್ದಾರೆ.