ಬೆಂಗಳೂರು

ಸರಣಿ ಹತ್ಯೆ: ಪರಮೇಶ್ವರ್ ಅವರನ್ನೇ ಹೊಣೆ ಮಾಡುವ ಸಾಧ್ಯತೆ.?

ಬೆಂಗಳೂರು:- ಗೃಹ ಇಲಾಖೆಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ನಲ್ಲಿ ಜಿ.ಪರಮೇಶ್ವರ್ ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ಅವರೂ ಒಬ್ಬರು. ಹೀಗಾಗಿ ಅವರನ್ನು ಹಣಿಯಲು ಕೆಲವರು ಪ್ರಯತ್ನ ಮಾಡುತ್ತಿರಬಹುದು. ಈ ನಡುವೆ ರನ್ಯಾ ರಾವ್ ಪ್ರಕರಣದಿಂದ ಪರಮೇಶ್ವರ್ ಮುಜುಗರಕ್ಕೊಳಗಾಗಿದ್ದರು. ಸ್ವತಃ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ರನ್ಯಾಗೆ ಪರಮೇಶ್ವರ್ 15-20 ಲಕ್ಷ ಗಿಫ್ಟ್ ಕೊಟ್ಟಿದ್ದರು ಎಂದು ಹೇಳಿದ್ದು ಅವರ ವರ್ಚಸ್ಸಿಗೆ ಧಕ್ಕೆ ತಂದಿತ್ತು. ಇದರ ನಡುವೆ ಈಗ ದಕ್ಷಿಣ ಕನ್ನಡದಲ್ಲಿ ಸರಣಿ ಹತ್ಯೆಯಾಗುತ್ತಿರುವುದು ಮತ್ತು ಅದನ್ನು ತಡೆಯಲು ವಿಫಲವಾಗಿರುವುದಕ್ಕೆ ಪರಮೇಶ್ವರ್ ಅವರನ್ನೇ ಹೊಣೆ ಮಾಡುವ ಸಾಧ್ಯತೆಯಿದೆ.!?

ನಿನ್ನೆಯ ದಿನ ಸಿಎಂ ಸಿದ್ದರಾಮಯ್ಯ ದಿಢೀರ್ ಆಗಿ ಬಿ.ಕೆ ಹರಿಪ್ರಸಾದ್ ಅವರ ನಿವಾಸದ ಸದಾಶಿವ ನಗರಕ್ಕೆ ಭೇಟಿ ಮಾಡಿದ ನಂತರ ಗೃಹ ಸಚಿವರ ಬದಲಾವಣೆ ಮಾತು ಜೋರಾಗಿದೆ. ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದಿರುವ ಮುಸ್ಲಿಮ್ ಸಮುದಾಯವನ್ನು ಸಮಾಧಾನಪಡಿಸಲು ಸದ್ಯದಲ್ಲೇ ರಾಜ್ಯದಲ್ಲಿ ಗೃಹ ಖಾತೆ ಬದಲಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ಇನ್ನೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾ ಉಸ್ತುವಾರಿಯಿಂದ ಹೊರ ಬರಲು ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.