Uncategorized

ಸರ್ಕಾರಿ ಬಸ್ ಚಾಲಕನ ಮೇಲೆ ಪೋಲಿಸಪ್ಪನಿಂದ ಹಲ್ಲೆ: ಇಲಾಖೆಯಿಂದ ಅಮಾನತಿನ ಗಿಫ್ಟ್.!

ವಿಜಯನಗರ:- ಓವರ್ ಟೇಕ್ ಮಾಡುವಾಗ ಬೈಕ್ ಗೆ ಟಚ್ ಆಗಿದೆ ಎಂದು ಆರೋಪಿಸಿ ಪೋಲಿಸ್ ಹೆಡ್ ಕಾನ್ಸ್ ಸ್ಟೇಬಲ್ ಓರ್ವ ಕರ್ತವ್ಯ ನಿರತ ಸಾರಿಗೆ ಬಸ್ ಚಾಲಕನ ಮೇಲೆ ಚಪ್ಪಲಿ, ಹೆಲ್ಮೆಟ್ ನಿಂದ ಹಲ್ಲೆ ನಡೆಸಿದ್ದ ಘಟನೆಯಲ್ಲಿ ಪೊಲೀಸ್‌ ಸಿಬ್ಬಂದಿ ಮಂಜುನಾಥ್‌ ರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಘಟನೆ ಎರಡು ದಿನಗಳ ಹಿಂದಷ್ಟೇ ವಿಜಯನಗರದ ಕೂಡ್ಲಿಗಿಯಲ್ಲಿ ನಡೆದಿತ್ತು.

ಹರಿಹರ ಘಟಕಕ್ಕೆ ಸೇರಿದ ಸಾರಿಗೆ ಬಸ್ ಬಳ್ಳಾರಿಗೆ ಹೋಗುತ್ತಿತ್ತು, ಕೊಟ್ಟೂರಿನಿಂದ ಕೂಡ್ಲಿಗಿ ಬರುವ ರಸ್ತೆಯಲ್ಲಿನ ಮಲ್ಲನಾಯಕಹಳ್ಳಿ ಬಳಿ ಬಂದಾಗ ಬಸ್ ಚಾಲಕ ರಾಮಲಿಂಗಪ್ಪ ಕೂಡ್ಲಿಗಿ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಮಂಜುನಾಥ ಹಾಗೂ ಇನ್ನೊಬ್ಬ ಕಾನ್‌ಸ್ಟೆಬಲ್‌ ಇದ್ದ ಬೈಕ್‌ನ್ನು ಹಿಂದಿಕ್ಕಿದ್ದರು.

ಇನ್ನೇನು ಬೈಕ್ ಅನ್ನು ಹಿಂದಿಕ್ಕಬೇಕು ಅನ್ನುವಷ್ಟರಲ್ಲಿ ಎದುರಿನಿಂದ ಕಾರೊಂದು ಬಂದಿದೆ. ಕೂಡಲೇ ಎಚ್ಚೆತ್ತ ಸಾರಿಗೆ ಚಾಲಕ ರಾಮಲಿಂಗಪ್ಪ ಬಸ್ ಅನ್ನು ಎಡಕ್ಕೆ ಎಳೆದುಕೊಂಡಿದ್ದು, ಈ ವೇಳೆ ಬಸ್ ನ ಹಿಂಭಾಗ ಬೈಕ್ ನ ಹ್ಯಾಂಡಲ್ ಗೆ ಚೂರು ಟಚ್ ಆಗಿತ್ತು. ಈ ವೇಳೆ ಏನಾಯ್ತು ಎಂದು ಚಾಲಕ ಮಿರರ್ ಮೂಲಕ ವೀಕ್ಷಿಸಿದ್ದಾರೆ. ಆದರೆ, ಏನೂ ಕಾಣದ ಹಿನ್ನೆಲೆ ಮುಂದೆ ಸಾಗಿದ್ದರು. ಇದರಿಂದ ಸಿಟ್ಟಾದ ಕೂಡ್ಲಿಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಮಂಜುನಾಥ್ ಗಜಾಪೂರ ಬಳಿ ಬಸ್ ಅನ್ನು ನಿಲ್ಲಿಸಿ, ಬಳಿಕ ಬಸ್ ಒಳಗೆ ಬಂದ ಮಂಜುನಾಥ್ ಏನನ್ನು ಪ್ರಶ್ನೆ ಮಾಡದೆ ಅವಾಚ್ಯ ಶಬ್ದದಿಂದ ನಿಂದಿಸಿ, ಅಲ್ಲದೇ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಚಾಲಕನ ಮೇಲೆ ಹಲ್ಲೆ ನಡೆಸಿದ್ದನು, ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯರು ಸೇರಿದಂತೆ ಹಲವರು ಅಂಗಲಾಚಿ ಕೇಳಿಕೊಂಡರು ತನ್ನ ನೀಚ ಬುದ್ಧಿ ಬಿಡದ ಪೋಲಿಸಪ್ಪ ಮನಬಂದಂತೆ ಥಳಿಸಿದ್ದಾನೆ. ಜೊತೆಗೆ ಚಾಲಕನ ಜೇಬಿನಲ್ಲಿದ್ದ ಮೊಬೈಲ್ ಅನ್ನು ಕಿತ್ತುಕೊಂಡು ಸ್ಟೇಷನ್ ಗೆ ಬಾ ಎಂದು ಹೇಳಿ ಬಸ್ ನಿಂದ ಇಳಿದು ಹೋದನು.

ಬಸ್ಸಿನಿಂದ ಇಳಿದ ಚಾಲಕ ನಾನೇನು ತಪ್ಪು ಮಾಡಿಲ್ಲ, ದಯವಿಟ್ಟು ಮೊಬೈಲ್ ನೀಡುವಂತೆ ರಾಮಲಿಂಗಪ್ಪ ಕೇಳಿದ್ದರು. ಇದರಿಂದ ಮತ್ತಷ್ಟು ಕೆರಳಿದ ಮಂಜುನಾಥ ತನ್ನ ಕೈಯಲ್ಲಿದ್ದ ಹೆಲ್ಮೆಟ್ ನಿಂದ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video