ಚಿಕ್ಕಮಗಳೂರು

ಸರ್ಕಾರಿ ಶಾಲೆಯ ದಾಖಲಾತಿಗೆ ಪ್ರೋತ್ಸಾಹ ಧನ ನೀಡುವ ಕಾಂತರಾಜ್.!

ಚಿಕ್ಕಮಗಳೂರು:- ಇಂದು ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗೆ ಕಮ್ಮಿಇಲ್ಲವೆಂಬಂತೆ ಈ ಬಾರಿ ಫಲಿತಾಂಶಗಳು ನಾವು ನೋಡಿದ್ದೇವೆ. ಇದನ್ನು ಮುಂದೆ ಮೀರಿಸುವಂತೆ ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಕಡುಹಿನಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಒಂದನೇ ಮತ್ತು 2ನೇ ತರಗತಿಗೆ ಹೊಸದಾಗಿ ದಾಖಲಾಗುವ ಪ್ರತಿ ಮಗುವಿನ ಹೆಸರಿನಲ್ಲಿ ₹1000 ರೂಪಾಯಿ ಮಗುವಿನ ಹೆಸರಿನಲ್ಲಿ ಪ್ರೊತ್ಸಾಹ ಧನವಾಗಿ ಠೇವಣೆ ಇಟ್ಟು, ಸರ್ಕಾರಿ ಶಾಲೆಗೆ ದಾಖಲಾಗಲು ಪ್ರೋತ್ಸಾಹಿಸುವ ಕಾರ್ಯವನ್ನು ಸ್ಥಳೀಯರು ಆರಂಭಿಸಿ ಖಾಸಗಿ ಶಾಲೆಗೆ ಸೆಡ್ಡುಹೊಡೆದು ಉತ್ತಮ ಫಲಿತಾಂಶ ನೀಡಲು ಮುಂದೆ ಬಂದಿರುವುದು ಮಾದರಿಯಾಗಿದೆ.

ಈ ಶಾಲೆಯ ಹಳೆ ವಿದ್ಯಾರ್ಥಿಯಾಗಿ, ಹತ್ತು ಹಲವು ಸಂಘಟನೆಯಲ್ಲಿ ತೊಡಗಿಕೊಂಡು ಸಮಾಜ ಸೇವೆಯಲ್ಲಿ ಮುನ್ನುಗಿದ ಇವರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದವರು.

ಜೇಸಿ ಸಂಸ್ಥೆಯ ಪೂರ್ವ ಅಧ್ಯಕ್ಷರು, ಯುವಜನ ಮೇಳದ ಮಾಜಿ ಅಧ್ಯಕ್ಷರಾದ ಎನ್.ಎಂ.ಕಾಂತರಾಜ್ ರವರು ನೂತನವಾಗಿ ದಾಖಲಾದ ಮಗುವಿಗೆ ಪ್ರೋತ್ಸಾಹ ಧನ ನೀಡಲು ಒಪ್ಪಿಕೊಂಡಿದ್ದಾರೆ.

1, 2, 3ನೇ ತರಗತಿಯ ಪ್ರತಿ ಮಗುವಿಗೆ ಉಚಿತ ನೋಟ್ ಬುಕ್ ಹಾಗೂ ಸ್ಕೂಲ್ ಬ್ಯಾಗ್ ನೀಡುವುದಾಗಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಂ.ಜಗದೀಶ್ ಕೂಡ ಒಪ್ಪಿಕೊಂಡಿರುತ್ತಾರೆ.

1,2,3ನೇ ತರಗತಿಯ ಎಲ್ಲಾ ಮಕಳಿಗೆ ಉಚಿತವಾಗಿ ಒಂದು ದಿನದ ಶೈಕ್ಷಣಿಕ ಪ್ರವಾಸದ ಸೌಲಭ್ಯವನ್ನು ಶಾಲಾ ಸಮಿತಿಯ ಎಲ್ಲಾ ಸದಸ್ಯರು ಸೇರಿ ಮಾಡಲಿದ್ದಾರೆ.

ಇಲ್ಲಿ ಮಗುವನ್ನು ದಾಖಲಿಸಿದರೆ ಈ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ, ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಸರ್ಕಾರಿ ಶಾಲಾ ಮಕ್ಕಳ ಪ್ರೋತ್ಸಾಹ ನೀಡುವ ಗಣ್ಯರು ಕೋರಿದ್ದಾರೆ.