ಉಡುಪಿ

ಸಿಎಂಗೆ ಅವಹೇಳನಕಾರಿ ಚಾಟ್: ಹೋಂ ಗಾರ್ಡ್ ಬಂಧನ

ಉಡುಪಿ:- ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೋಂ ಗಾರ್ಡ್​ ಅವಹೇಳಕನಕಾರಿ ಕಮೆಂಟ್ ಮಾಡಿದ್ದಾನೆ.
ಸಿಎಂ ಸಿದ್ದರಾಮಯ್ಯನನ್ನು ಕೊಂದ್ರೆ ಹಿಂದೂಗಳಿಗೆ ನೆಮ್ಮದಿ ಎಂದು ಕಾಮೆಂಟ್ ಹಾಕಿದ್ದ ಉಡುಪಿ ಜಿಲ್ಲೆಯ ಕಾರ್ಕಳದ ಹೋಂ ಗಾರ್ಡ್ ಸಂಪತ್ ಸಾಲಿಯಾನ್​ ಬಂಧನವಾಗಿದೆ.

ಬೆಂಗಳೂರಿನ ಹೋಂ ಗಾರ್ಡ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂಪತ್ ಸಾಲಿಯಾನ್​ ಎನ್ನುವಾತ ಸಿಎಂ ಸಿದ್ದರಾಮಯ್ಯನನ್ನು ಕೊಂದ್ರೆ ಹಿಂದೂಗಳಿಗೆ ನೆಮ್ಮದಿ ಎಂದು ಸಂಪತ್ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಹಾಕಿದ್ದಾನೆ. ಈ ಸಂಬಂಧ ಸದ್ಯ ಕಾರ್ಕಳ ಪೊಲೀಸರು ಹೋಂ ಗಾರ್ಡ್ ಸಂಪತ್​ನನ್ನು ಬಂಧಿಸಿದ್ದಾರೆ.

ಸುಹಾಸ್ ಶೆಟ್ಟಿಯನ್ನು ಕೊಂದವರು, ಕೊಂದವರ ಮನೆಯವರು, ಅಲ್ಲಿ ಯಾರು ಸಿಗುತ್ತಾರೆ ಅವರನ್ನು ಕೊಚ್ಚಿ ಕೊಲ್ಲುತ್ತೇವೆ ಎಂದು ​ ಧನುಷ್.ಸಿ ಎಂಬುವರು ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದ ಫೇಸ್​​ಬುಕ್ ಫೋಸ್ಟ್​ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ‌ ತಣ್ಣೀರುಪಂಥ ನಿವಾಸಿ ಧನುಷ್.ಸಿ ಪುಂಜಾಲಕಟ್ಟೆ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಕೋಮುದ್ವೇಷ ಹರಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂಥ ಪ್ರಚೋದನಾತ್ಮಕ ವಿಡಿಯೋವನ್ನು ಪ್ರಸಾರಮಾಡಿದ ಹಿನ್ನೆಲೆಯಲ್ಲಿ ಬಿಎನ್​ಎಸ್​ 196(1)(A), 353(1)(C)ರ ಅಡಿ ಪ್ರಕರಣ ದಾಖಲಾಗಿದೆ.