ವಿಜಯಪುರ

ಸಿಎಂಗೆ ಯಾವ ನೈತಿಕತೆ ಇದೆ ಪ್ರಧಾನಿಗಳ ಆಡಳಿತ ವೈಖರಿ ಬಗ್ಗೆ ಮಾರ್ಕ್ಸ್ ಕೊಡಲು.- ಸಂಸದ ಕಾರಜೋಳ

ವಿಜಯಪುರ:- 11 ವರ್ಷ ನರೇಂದ್ರ ಮೋದಿ ಸರ್ಕಾರ ಪೂರೈಸಿದ ಶುಭ ಸಂದರ್ಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನರೇಂದ್ರ ಮೋದಿ ಸಾಧನೆಗೆ ಸೊನ್ನೆ ಕೊಟ್ಟಿರುವ ವಿಚಾರ‌ವಾಗಿ ಇಂದು ವಿಜಯಪುರದಲ್ಲಿ ಸಂಸದ ಗೋವಿಂದ ಕಾರಜೋಳರವರು ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

ಅವರು ಮಾತನಾಡಿ, ನರೇಂದ್ರ ಮೋದಿ ಆಡಳಿತದ ಮೌಲ್ಯ ಮಾಪನ ಮಾಡುವ ನೈತಿಕತೆ ಸಿದ್ದರಾಮಯ್ಯಗಿಲ್ಲ, ನೀವು ಅಧಿಕಾರಕ್ಕೆ ಬಂದು ಎರಡು ವರ್ಷವಾಯಿತು. ಬಜೆಟ್ ಮಂಡಿಸಿದಾಗ ಎರಡು ಭಾಗವಾಗಿ ವಿಂಗಡಿಸಬೇಕಿತ್ತು, ಪ್ಲ್ಯಾನ್ಡ್ ಹಾಗೂ ನಾನ್ ಪ್ಲ್ಯಾನ್ಡ್ ತರಹ ಮಾಡಬೇಕಿತ್ತು. ಆದರೆ, ಸಿದ್ದರಾಮಯ್ಯ ನವರೇ ನೀವು ನರೇಂದ್ರ ಮೋದಿ ಅವರಿಗೆ ಜಿರೋ ಮಾರ್ಕ್ಸ್ ಕೊಡುವ ಬದಲು ನೀವು ಎರಡು ವರ್ಷದಲ್ಲಿ ಮಾಡಿದ ಅಭಿವೃದ್ಧಿ, ಸಾಧನೆ ವಿಚಾರವಾಗಿ ಶ್ವೇತ ಪತ್ರ ಹೊರಡಿಸಿ ಎಂದರಲ್ಲದೆ, ಆಲಮಟ್ಟಿ ಯೋಜನೆಗೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ಎಷ್ಟು ಸಾವಿರ ಕೊಟ್ಟೀದ್ದೀರಿ ತಾವು ಹೇಳಿ ಎಂದ ಕಾರಜೋಳರವರು, ಬ್ಯಾಂಕಿನಿಂದ ಸಾಲ ಮಾಡಿದ ಸಾಲ ಹಾಗೂ ಸರ್ಕಾರಿ ನೌಕರರ ಸಂಬಳ ಕೊಡುವುದೇ ನಿಮಗೆ ಕಷ್ಟವಾಗಿದೆ ಎಂದರು.

ಕಳೆದ ನಾಲ್ಕು ತಿಂಗಳಲ್ಲಿ‌ 700ಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರವಾಗಿದೆ, ಆರ್ ಸಿ ಬಿ ವಿಜಯೋತ್ಸವ ಆಚರಣೆ ವೇಳೆ 11 ಜನ ಮೃತಪಟ್ಟರು, ಕರ್ನಾಟಕದ ಸಿದ್ದರಾಮಯ್ಯ ಆಡಳಿತದ ವೇಳೆ ಕೊಲೆ, ಅತ್ಯಾಚಾರ ಸುಲಿಗೆ ನಡೆಯುತ್ತಿದೆ ಎಂದು ನೇರವಾಗಿ ಆರೋಪ ಮಾಡಿದರು. ತಮಗೆ ಯಾವ ನೈತಿಕತೆ ಇದೆ ಪ್ರಧಾನಿಗಳ ಆಡಳಿತ ವೈಖರಿ ಮಾರ್ಕ್ಸ್ ಕೊಡಲು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ವರದಿ: ವಿಜಯಪುರ ಮದೂರ್