ಬೆಂಗಳೂರು:- ಸಿಎಂ ಸ್ಥಾನ ಬದಲಾವಣೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಸಿಎಂ ಪರ ಬ್ಯಾಟಿಂಗ್ ಆರಂಭಿಸಿದ ನಂತರ ಮಾತನಾಡಿ, ಸಿಎಂ ಹೇಳಿದ ಮೇಲೆ ಎಲ್ಲದಕ್ಕೂ ಇತಿಶ್ರೀ ಹಾಡಿದಂತೆ. ಸಿಎಂ ಹೇಳಿರುವುದರಲ್ಲಿ ಹೊಸದೇನಿಲ್ಲ, ಸಿಎಂ ಸ್ಥಾನಕ್ಕೆ ನಾನು ಆಕಾಂಕ್ಷಿಯೂ ಅಲ್ಲ, ಪ್ರತಿಸ್ಪರ್ಧಿಯೂ ಅಲ್ಲ. ಈಗ ಹೇಳಬೇಕಾದ ಸಂದರ್ಭ ಬಂದಿರಬಹುದು ಹೀಗಾಗಿ ಸಿಎಂ ಹೇಳಿದ್ದಾರೆ ಎಂದರು.
ಸುರ್ಜೆವಾಲಾ ಅವರು ರಾಜ್ಯಕ್ಕೆ ನಾಯಕತ್ವ ಬದಲಾವಣೆ ಅಭಿಪ್ರಾಯ ಸಂಗ್ರಹಕ್ಕೆ ಬಂದಿಲ್ಲ, ನಿಗಮ ಮಂಡಳಿ ಚರ್ಚೆ ದೆಹಲಿಯಲ್ಲಿ ಇರಬಹುದು. ಸಿಎಂ ಬದಲಾವಣೆ ಎಲ್ಲಿಯೂ ಚರ್ಚೆಯೇ ಆಗಿಲ್ಲ. ಅಧಿಕಾರ ಹಂಚಿಕೆ ಇಲ್ಲ ಅಂತ ಸಿಎಂ ಸ್ಪಷ್ಟಪಡಿಸಿದ್ದಾರೆ. ಯಾರೂ ಶಾಸಕರೂ ಕೂಡ ನಾಯಕತ್ವ ಬದಲಾವಣೆ ಮಾಡಿ ಅಂದಿಲ್ಲ. ಸುರ್ಜೆವಾಲಾ ಮುಂದೆ ಎಲ್ಲರ ಡಿಮ್ಯಾಂಡ್ ಅನುದಾನದ್ದು. ಕೇವಲ 10% ಜನ ಮಾತ್ರ ನಾಯಕತ್ವ ಬಗ್ಗೆ ಮಾತಾಡಿರಬಹುದು ಎಂದಿದ್ದಾರೆ.