ಬೆಂಗಳೂರು

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ಶತಸಿದ್ಧ.- ಆರ್.ಅಶೋಕ್

ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇನ್ನೂ ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಏತನ್ಮಧ್ಯೆ, ನಗರದಲ್ಲಿ ವರದಿಗಾರನೊಂದಿಗೆ ಮಾತಾಡಿರುವ ವಿರೋಧ ಪಕ್ಷದ ನಾಯಕ ಅರ್ ಅಶೋಕರವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಶಿವಕುಮಾರ್ ಆ ಸ್ಥಾನಕ್ಕೇರೋದು ಶತಸಿದ್ಧ ಎಂದು ಹೇಳಿದರು.

ತಾನು ಭವಿಷ್ಯ ನುಡಿದಿದ್ದು ಮತ್ತು ರಾಜಣ್ಣ ಕ್ರಾಂತಿ ನಡೆಯುವ ಮುನ್ಸೂಚನೆ ನೀಡಿದ್ದು ನಿಜವಾಗುತ್ತಿದೆ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ. ಅದು ಮೊದಲಿಂದಲೂ ಇತ್ತು, ಈಗ ವಿಕೋಪಕ್ಕೆ ಹೋಗಿದೆ. ಕೆಲ ಮಂತ್ರಿಗಳು ಸಹ ಸ್ಥಾನ ಉಳಿಸಿಕೊಳ್ಳಲು ದೆಹಲಿಗೆ ಹೋಗಿದ್ದಾರೆ ಎಂದು ಅಶೋಕ್ ಹೇಳಿದರು