Uncategorized

ಸುಪ್ರೀಂ ಕೋರ್ಟ್‌ನ ಆದೇಶ: ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರದ ರಜೆ ರದ್ದು.!

ದೆಹಲಿ:- ಸುಪ್ರೀಂ ಕೋರ್ಟ್‌ನಲ್ಲಿ ಕಚೇರಿಗಳ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರದ ರಜೆಯನ್ನು ರದ್ದುಪಡಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್‌ನ ಸೂಚನೆಯಂತೆ ಈ ಆದೇಶ ಜಾರಿಗೆ ಬಂದಿದ್ದು ರಾಷ್ಟ್ರಪತಿಯವರ ಅನುಮತಿ ಅಂಕಿತವೂ ದೊರೆತಿದೆ.

ಜೂ.14 ರಿಂದಲೇ ಈ ಆದೇಶ ಜಾರಿಯಾಗಿರುವುದರಿಂದ ಇನ್ನು ಮುಂದೆ ಯಾವುದೇ ಶನಿವಾರ ಸುಪ್ರೀಂ ಕೋರ್ಟ್‌ ಕಚೇರಿಗಳ ಸರ್ಕಾರಿ ನೌಕರರಿಗೆ ರಜೆ ಇರುವುದಿಲ್ಲ. ಹೀಗಾಗಿ ಇನ್ನು ಮುಂದೆ ಗೊತ್ತುಪಡಿಸಿದ ರಜಾ ದಿನಗಳ ಹೊರತು ಪ್ರತಿದಿನ 5.00 ಗಂಟೆಯವರೆಗೆ ಕೋರ್ಟ್‌ ಕಾರ್ಯ ನಿರ್ವಹಿಸಲಿದ್ದು, 4.30ರ ಬಳಿಕ ಕೇವಲ ತುರ್ತು ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ.

2 ಮತ್ತು 4 ನೇ ಶನಿವಾರ ರಜಾ ದಿನದ ಆದೇಶವನ್ನು ಹಿಂಪಡೆದಿದ್ದ ಕೇಂದ್ರ ಸರ್ಕಾರ ರಾಜ್ಯಪತ್ರವನ್ನೂ ಸಹ ಹೊರಡಿಸಿದೆ.