ಬೆಂಗಳೂರು:- ಸುಹಾಸ್ ಶೆಟ್ಟಿ ಪ್ರಕರಣವನ್ನು ಎನ್ಐಎಗೆ ವಹಿಸುವುದು ಅನಿವಾರ್ಯ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಅವರು ಮಾಧ್ಯಮದೊಂದಿಗೆ ಮಾತನಾಡಿ, ಪ್ರದತ್ತವಾದ ಅಧಿಕಾರವನ್ನು ಬಳಸಿ ತನಿಖೆಗೆ ಕೇಳುತ್ತಿರುವುದಾಗಿ ಹೇಳಿದ್ದು,
ಆ ಆಧಾರದ ಮೇಲೆ ಅವರು ಎನ್ಐಎ ತನಿಖೆಗೆ ವಹಿಸುವಂತೆ ಹೇಳಿದ್ದಾರೆ. ನಮಗೆ ವಹಿಸುವುದು ಅನಿವಾರ್ಯವಿದೆ ಎಂದರು.
ಯಾವ ಕಾರಣಕ್ಕೆ ಎನ್ಐಎ ತನಿಖೆಯಾಗಬೇಕೆಂದು ಸ್ಪಷ್ಟ ವಿವರಣೆ ನೀಡಿಲ್ಲ. ಆದರೆ, ಕೆಲವು ಸೆಕ್ಷನ್ಗಳನ್ನು ನಮೂದಿಸಿ ತನಿಖೆಗೆ ವಹಿಸುವಂತೆ ಹೇಳಿದ್ದಾರೆ. ಈ ಪತ್ರದ ಹಿಂದೆ ಬಿಜೆಪಿಯವರ ಕೈವಾಡವಿದೆ ಎಂದು ಪತ್ರದಲ್ಲೇನು ಉಲ್ಲೇಖ ಇಲ್ಲ. ನಮಗೆ ಹೆಚ್ಚಿನ ಮಾಹಿತಿಗಳಿಲ್ಲ ಎಂದಿದ್ದಾರೆ.