ಬೆಂಗಳೂರು:- ಅಹಮಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್ ಫೈನಲ್ ಪಂದ್ಯದಲ್ಲಿ ಜಯಗಳಿಸಿದ ಆರ್ಸಿಬಿ ತಂಡ ನಿನ್ನೆಯ ದಿನವಾದ ಬುಧವಾರ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿತ್ತು. ತಂಡದ ಆಟಗಾರರಿಗೆ ಹಾಗೂ ಸಿಬ್ಬಂದಿಗೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಸರ್ಕಾರದ ಸನ್ಮಾನ ಆದ ಬಳಿಕ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಲ್ಲೂ ಚಿನ್ನಸ್ವಾಮಿ ಸ್ಟೇಡಿಯಂಗೆ ಅಭಿಮಾನಿಗಳಿಗೆ ಉಚಿತ ಪ್ರವೇಶ ಇತ್ತು. ಹೀಗಾಗಿ ಬೆಳಗಿನಿಂದಲೇ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಹೀಗೆ ಬಂದವರು ಸ್ಟೇಡಿಯಂಗೆ ಪ್ರವೇಶಿಸುವಾಗ ನೂಕುನುಗ್ಗಲು ಆಗಿದ್ದು, 11 ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿಯ ವಿವರ
ಭೂಮಿಕ್, 20 ವರ್ಷ (ನೆಲಮಂಗಲ)
ಸಹನ 19 ವರ್ಷ (ಕೋಲಾರ)
ಪೂರ್ಣಚಂದ್, 32 ವರ್ಷ (ಮಂಡ್ಯ)
ಚಿನ್ಮಯಿ, 19 ವರ್ಷ
ದಿವ್ಯಾಂಶಿ, 13 ವರ್ಷ
ಶ್ರವಣ್, 20 ವರ್ಷ (ಚಿಕ್ಕಬಳ್ಳಾಪುರ)
ದೇವಿ, 29 ವರ್ಷ
ಶಿವಲಿಂಗ್, 17 ವರ್ಷ
ಮನೋಜ್, 33 ವರ್ಷ (ತುಮಕೂರು)
ಅಕ್ಷತಾ, (ಮಂಗಳೂರು) ಹೆಸರು ಪತ್ತೆಯಾಗಿಲ್ಲ, 20 ವರ್ಷ.
ವೈದೇಹಿ ಆಸ್ಪತ್ರೆ ಕಾಲ್ತುಳಿತ ಸಂಭವಿಸುತ್ತಿದ್ದಂತೆಯೇ ಗಾಯಾಳುಗಳನ್ನು ಅಕ್ಕಪಕ್ಕಪಕ್ಕದ ಆಸ್ಪತ್ರೆಗಳಿಗೆ ರವಾನಿಸಲಾಯಿತು. ಅಭಿಮಾನಿಗಳ ಸಾಗರ ಎಷ್ಟಿತ್ತು ಅಂದರೆ, ಆಯಂಬುಲೆನ್ಸ್ಗಳು ಹೋಗಲೂ ದಾರಿ ಇರಲಿಲ್ಲ. ಈ ನಡುವೆ ಹಲವರನ್ನು ಮಲ್ಯ ರಸ್ತೆಯಲ್ಲಿರುವ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತರ ಪೈಕಿ ಶ್ರವಣ್, ಭೂಮಿಕ್, ಮನೋಜ್, ಚಿನ್ಮಯಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಮಧ್ಯರಾತ್ರಿಯೇ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಇನ್ನುಳಿದ ಮೃತದೇಹಗಳ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ.
ವಿಧಾನಸೌಧದ ಸಮಾರಂಭ ಮುಗಿಯುತ್ತಿದ್ದಂತೆಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ದುರವಂತವೇ ನಡೆದು ಹೋಗಿದ್ದರಿಂದ ಸಂಭ್ರಮ ಮಾಯವಾಗಿತ್ತು. ಕೇವಲ 15 ನಿಮಿಷಳಲ್ಲೇ ಕಾರ್ಯಕ್ರಮ ಮುಗಿಸಲು ಡಿಸಿಎಂ ಡಿ.ಕೆ ಶಿವಕುಮಾರ್ ಸೂಚಿಸಿದರು.
18 ವರ್ಷಗಳ ಬಳಿಕ ಆರ್ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದಿದ್ದರಿಂದ ಇಡೀ ಕರುನಾಡು ಸಂಭ್ರಮದಲ್ಲಿ ತೇಲಾಡಿದ್ದರೆ, ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿದಿಂದಾದ ಸಾವುಗಳು ರಾಜ್ಯದಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ.