ಉಡುಪಿ:- ನಿರೀಕ್ಷೆ ಮಾಡದ ಅ ಒಂದು ಒಳಕರೆ ಎಂತವರನ್ನೂ ತಬ್ಬಿಬ್ಬು ಮಾಡುವಂತಿತ್ತು. ಯಾವಾಗಲೂ ಕುಟುಂಬದ, ಸ್ಥಳೀಯ ಅಥವಾ ಸಂಬಂಧಿಗಳ ಕರೆ ಬರುವುದು ಸಾಮಾನ್ಯ. ಆದರೆ, ಹಲೋ ನಾನು ಹೋಮ್ ಮಿನಿಸ್ಟರ್ ಜಿ.ಪರಮೇಶ್ವರ ಮಾತಾಡ್ತಿದ್ದೀನಿ. ನೀವು ನಿನ್ನೆ ಕೋಟ ಠಾಣೆಗೆ ಬಂದಿದ್ರಾ, ಯಾಕೆ ಬಂದಿದ್ದು, ಪೊಲೀಸರು ಹೇಗೆ ಮಾತನಾಡಿದರು ಎಂದು ಕೇಳಿದಾಗ ದೂರುದಾರರಿಗೆ ಒಂದು ಕ್ಷಣ ಏನಾಗಬೇಡ, ಅದು ಇಲ್ಲಿ ನಡೆದು ಹೋಯಿತು.
ಶನಿವಾರವಾದ ನಿನ್ನೆಯ ದಿನ ಬೆಳಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ವಾಪಸಾಗುತ್ತಿದ್ದಾಗ ಕೋಟ ಠಾಣೆಗೆ ಡಿಢೀರ್ ಭೇಟಿ ನೀಡಿ ಪೊಲೀಸರ ಕಾರ್ಯವೈಖರಿಯ ಪರಿಶೀಲಿಸಿದಾಗ ದೂರುದಾರರಿಗೆ ಗೃಹ ಸಚಿವರು ಕರೆ ಮಾಡಿದ ಸಂದರ್ಭ ಬಂದಿತ್ತು.
ಠಾಣೆಯ ರಿಜಿಸ್ಟರ್ ಬುಕ್ ಪಡೆದು ವೀಕ್ಷಿಸಿ ಸಿಬ್ಬಂದಿಗೆ ಈ ನಂಬರ್ ಗೆ ಕರೆ ಮಾಡಿ ಎಂದರು. ಅದರಂತೆ ಕರೆ ಸ್ವೀಕರಿಸಿದವರು ಅತ್ತ ಕಡೆಯಿಂದ ಕರೆ ಸ್ವೀಕರಿಸಿದಾಗ ಇತ್ತ ಕಡೆಯಿಂದ ಸಚಿವರು, “ನಾನು ಹೋಮ್ ಮಿನಿಸ್ಟರ್’ ಎಂದರು. ಬಳಿಕ ಅವರ ದೂರಿನ ಬಗ್ಗೆ ಠಾಣೆಯ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಕೇಳಿದರು. ಈ ನಡೆ ಕೆಲಕ್ಷಣ ಸಿಬ್ಬಂದಿಯ ಎದೆ ಬಡಿತ ಹೆಚ್ಚಳಕ್ಕೂ ಕಾರಣವಾಗಿತ್ತು. ಹೀಗೆ ಮತ್ತಿಬ್ಬರು ದೂರುದಾರರಿಗೂ ಕರೆ ಮಾಡಿ ಮಾತನಾಡಿದರು.
ಬಳಿಕ ಕಡತಗಳನ್ನು ಪರಿಶೀಲಿಸಿ, ದಲಿತ ಸಮುದಾಯಗಳ ಸಭೆ ಮತ್ತು ಅವರೊಂದಿಗಿನ ಸಮನ್ವಯಗಳ ಕುರಿತು ಚರ್ಚಿಸಿದರು.
ಅಪಘಾತ, ಕ್ರೂರ ಪ್ರಕರಣಗಳು, ಅಧಿಕೃತ ರಕ್ಷಣಾ ಆಯುಧಗಳ ಪರವಾನಿಗೆ ಹೊಂದಿರುವವರ ಕುರಿತೂ ವಿವರ ಪಡೆದರು. ಎಲ್ಲಾ ಜಾತಿ, ಸಮುದಾಯದ ಸಣ್ಣ, ದೊಡ್ಡ ಪ್ರಾರ್ಥನಾ ಮಂದಿರಗಳಿಗೆ ರಾತ್ರಿ ಬೆಳಕಿನ ಸೌಲಭ್ಯ ಹಾಗೂ ಸಿಸಿಟಿವಿ ಅಳವಡಿಸಿ, ಅದರ ಮಾಹಿತಿ ಠಾಣೆಯಲ್ಲಿ ಲಭ್ಯವಾಗಿಸಲು ಸೂಚಿಸಿದರು.