ಬೆಂಗಳೂರು:- ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕ ಕಟ್ಟುವ ವಿಚಾರದಲ್ಲಿ ಸಾಕಷ್ಟು ವಿರೋಧಗಳು, ಅಹಿತಕರ ಘಟನೆಗಳು ರಸ್ತೆ ಮಧ್ಯ ನಡೆಯುತ್ತಲೇ ಇವೆ. ಇಂಥದ್ದೆ ಪ್ರಕರಣ ಕೇರಳ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹಾಳಾದ ಹೆದ್ದಾರಿಗೆ ಟೋಲ್ ಶುಲ್ಕ ಕಟ್ಟಲ್ಲ ಎಂದ ವ್ಯಕ್ತಿಯು ಹಿಂಸಾತ್ಮಕವಾಗಿ ಯಾವ ನಿರ್ಧಾರ ಕೈಗೊಳ್ಳದೇ ವಿನೂತನ ಪ್ರತಿಭಟನೆ ಮಾಡಿದ್ದಾರೆ.
ಯಾವುದೇ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವಾಗ ಬೈಕ್, ಟ್ರ್ಯಾಕ್ಟರ್ ಹೊರತು ಪಡಿಸಿದರೆ ಎಲ್ಲ ವಾಹನಗಳಿಗೆ ಟೋಲ್ ಶುಲ್ಕ ಕಟ್ಟುವ ನಿಯಮ ಇದೆ. ಆದರೆ, ಅದೆಷ್ಟೋ ರಸ್ತೆಗಳು ಸಮರ್ಪಕವಾಗಿ ಇಲ್ಲದಿದ್ದರೂ ವಾಹನ ಸವಾರರು ಟೋಲ್ ಶುಲ್ಕ ಕಟ್ಟುತ್ತಾರೆ. ಕೇರಳದ ಛಾಯಾಗ್ರಾಹಕ ಪಾಲಕ್ಕಾಡ್‌ನ ಪನ್ನಿಯಂಕರ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕವನ್ನು ಪಾವತಿಸಲು ನಿರಾಕರಿಸಿದ್ದಾರೆ. ಈ ಭಾಗದಲ್ಲಿ ಹದಗೆಟ್ಟ ರಸ್ತೆಗಳಿವೆ. ಕಳಪೆ ರಸ್ತೆ ಸೌಲಭ್ಯ ಇದೆ. ಯಾವ ಕಾರಣಕ್ಕೂ ಟೋಲ್ ಗೇಟ್ ಶುಲ್ಕ ಪಾವತಿಸ ಎಂದು ಸುಮಾರು 9.5 ಗಂಟೆಗಳ ಕಾಲ ಟೋಲ್ ಪ್ಲಾಜಾದಲ್ಲೇ ಇದ್ದು ಧರಣಿ ಮಾಡಿದ್ದಾರೆ. ಉಚಿತ ಪ್ರವೇಶಕ್ಕೆ ಗಂಟೆಗಳ ಕಾಲ ಕಾಯ್ದಿದ್ದಾರೆ.
ಛಾಯಾಗ್ರಾಹಕ ಶೆಂಟೋ ವಿ.ಆಂಟೋ ಅವರು ಪಾಲಕ್ಕಾಡ್‌ನಿಂದ ಎರ್ನಾಕುಲಂ ಮತ್ತು ತ್ರಿಶೂರ್ ಮಾರ್ಗವಾಗಿ ಆಗಾಗಾ ಕೆಲಸದ ವಿಷಯವಾಗಿ ಸಂಚರಿಸುತ್ತಾರೆ. ಇಲ್ಲಿನ ರಸ್ತೆಗಳ ಸ್ಥಿತಿ ಶೂಚನೀಯವಾಗಿದೆ. ಅಲ್ಲಲ್ಲಿ ರಸ್ತೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸಂಚಾರ ವಿಳಂಬ ಮಾತ್ರವಲ್ಲದೇ ಆಯಾಸದಾಯಕವಾಗಿದೆ. ಇದು ಸುಗಮ ಸಂಚಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಿದ್ದರು ಟೋಲ್ ಶುಲ್ಕ ಏಕೆ ಪಾವತಿಸಬೇಕು ಎಂದು ಶೆಂಟೋ ಅವರು ಟೋಲ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.
ಕಳಪೆ ರಸ್ತೆ ಇದ್ದರೂ ಟೋಲ್ ಸಂಗ್ರಹ ಸಮರ್ಥಿಸಿಕೊಳ್ಳುತ್ತಿರುವುದು ಏಕೆ ಎಂದು ಗುಡುಗಿದ್ದಾರೆ. ಇದೇ ರಸ್ತೆಯಲ್ಲಿ ಒಡಾಡುವ ನಾನು ಸಾಕಷ್ಟು ಕೆಟ್ಟ ಅನುಭವ ಕಂಡಿದ್ದೇನೆ. ಅನಾನುಕೂಲ ಅನುಭವಿಸಿದ್ದೇನೆ. ತಮ್ಮ ಗರ್ಭಿಣಿ ಸಹೋದರಿಯನ್ನು ಇದೇ ಮಾರ್ಗವಾಗಿ ಕರೆದೊಯ್ದಯವಾಗ ಆರೋಗ್ಯ ಸಮಸ್ಯೆ ಉಂಟಾಗಿತ್ತು ಎಂದು ಹಲವು ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. ಕೆಲವು ಹೊತ್ತಿ ಸಿಬ್ಬಂದಿ ಮತ್ತು ಶೆಂಟೋ ಮದ್ಯ ವಾಗ್ದುದ್ಧ ನಡೆದಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸರಿ ಇಲ್ಲದ ರಸ್ತೆ ನಿರ್ವಹಣೆ, ಟೋಲ್ ಶುಲ್ಕ ಸಂಗ್ರಹ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.