ಹಾಸನ:- ಕೇಂದ್ರ ಜಲಶಕ್ತಿ ಮತ್ತು ರೇಲ್ವೇ ಖಾತೆಗಳ ರಾಜ್ಯ ಸಚಿವರಾಗಿರುವ ಸಚಿವ ವಿ ಸೋಮಣ್ಣ ಶನಿವಾರ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿರುವ ಕೋಡಿಮಠಕ್ಕೆ ಭೇಟಿ ನೀಡಿ ಶ್ರೀಗಳ ಅಶೀರ್ವಾದ ಪಡೆಯುವ ಮುನ್ನ ಒಂದು ಅಭೂತಪೂರ್ವ ಘಟನೆ ನಡೆಯಿತು.
ಹಾಸನ ಜಿಲ್ಲಾಧಿಕಾರಿ ಕೆಎಸ್ ಲತಾ ಕುಮಾರಿ ಸಚಿವರ ಕಾಲಿಗೆ ನಮಸ್ಕರಿಸಿ ಅಶೀರ್ವಾದ ಪಡೆದರು. ಸೋಮಣ್ಣ ಹಿರಿಯರು, ದೊಡ್ಡ ಹುದ್ದೆಯಲ್ಲಿರುವವರು, ಉತ್ತಮ ಕೆಲಸಗಾರರು, ಡಿಸಿ ಲತಾ ಅವರಿಗೆ ತಂದೆ ಸಮಾನರು ಮತ್ತು ತಮಗಿಂತ ಕಿರಿಯರಿಂದ ಎಲ್ಲ ರೀತಿಯ ಗೌರವ ಹೊಂದಲು ಉಳಿದವರಿಗಿಂತ ಹೆಚ್ಚು ಅರ್ಹರು. ಆದರೆ, ಒಬ್ಬ ಕರ್ತವ್ಯನಿರತ ಅಧಿಕಾರಿ ಹೀಗೆ ಸಾರ್ವಜನಿಕವಾಗಿ ಸಚಿವರೊಬ್ಬರ ಪಾದಮುಟ್ಟಿ ನಮ್ಮಸ್ಕರಿಸುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಖಾಸಗಿ ಕಾರ್ಯಕ್ರಮಗಳಲ್ಲಿ ಅವರು ಹಾಗೆ ಮಾಡಿದ್ದರೆ ತಪ್ಪೆನಿಸುತ್ತಿರಲಿಲ್ಲ. ಅದರೆ, ಕೇಂದ್ರ ಸಚಿವರೊಬ್ಬರ ಭೇಟಿ ಯಾವತ್ತಿಗೂ ಖಾಸಗಿಯಾಗಿರದೆ ಅಧಿಕೃತ ಅನಿಸಿಕೊಳ್ಳುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಡಿಸಿಯವರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.