Uncategorized

ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯ ಸಭೆ ಜುಲೈ15ಕ್ಕೆ

ದೆಹಲಿ:- ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯ ಚಟುವಟಿಕೆಗಳನ್ನು ಕರ್ನಾಟಕದಿಂದಲೇ ಆರಂಭಿಸಲು ಎಐಸಿಸಿ ಮುಂದಾಗಿದೆ. ಜುಲೈ 15ರಂದು ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಆವರಣದಲ್ಲಿನ ಭಾರತ್‌ ಜೋಡೊ ಭವನದಲ್ಲಿ ಮಂಡಳಿಯ ಮೊದಲ ಸಭೆ ನಡೆಯಲಿದೆ. ಮಂಡಳಿಯ ಸದಸ್ಯರು, ಸಂಚಾಲಕರು, ಕಾರ್ಯದರ್ಶಿಗಳು, ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು ಸೇರಿದಂತೆ ದೇಶದ ವಿವಿಧ ರಾಜ್ಯಗಳ 90 ನಾಯಕರಿಗೆ ಆಹ್ವಾನ ನೀಡಲಾಗಿದೆ. ಐವರು ಮಾಜಿ ಮುಖ್ಯಮಂತ್ರಿಗಳು, ಹತ್ತು ಮಂದಿ ಕೇಂದ್ರದ ಮಾಜಿ ಸಚಿವರು ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿಯವರ ಜೊತೆ ಸಮಾಲೋಚಿಸಿದ ಬಳಿಕ ಮಂಡಳಿಯ ಸದಸ್ಯರು ಸಭೆಯ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಮಾಡಿರುವ ಸಲಹಾ ಮಂಡಳಿಯ ಸದಸ್ಯರಾಗಿರುವ ವಿಧಾನ ಪರಿಷತ್‌ ಸದಸ್ಯ, ಹರ್ಯಾಣ ಕಾಂಗ್ರೆಸ್‌ನ ಎಐಸಿಸಿ ಉಸ್ತುವಾರಿಯಾಗಿರುವ ಬಿ.ಕೆ. ಹರಿಪ್ರಸಾದ್‌ ಅವರು ಸಭೆಗೆ ಆಗಬೇಕಿರುವ ಪೂರಕ ಸಿದ್ಧತೆ ಕುರಿತು ಚರ್ಚಿಸಿದ್ದಾರೆ.

ಎಐಸಿಸಿ ರಚಿಸಿರುವ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ
1 ಸಿದ್ದರಾಮಯ್ಯ
2 ಬಿ.ಕೆ. ಹರಿಪ್ರಸಾದ್‌
3 ಅಶೋಕ್‌ ಗೆಹಲೋಟ್‌
4 ಭೂಪೇಶ್‌ ಬಘೇಲ್‌
5 ವಿ. ನಾರಾಯಣಸ್ವಾಮಿ
6 ಸಚಿನ್‌ ಪೈಲಟ್‌
7 ಗುರುದೀಪ್‌ ಸಿಂಗ್‌ ಸಪ್ಪಲ್‌
8 ಅರುಣ್‌ ಯಾದವ್‌
9 ವಿಜಯ್‌ ನಾಮ್‌ದೇವ್‌ರಾವ್‌ ವಡೆಟ್ಟಿವಾರ್‌
10 ವಿ. ಹನುಮಂತರಾವ್‌
11 ಅಮಿತ್‌ ಚಾವ್ಡಾ
12 ಬಿ.ಮಹೇಶ್‌ ಕುಮಾರ್‌ ಗೌಡ್‌
13 ಪೊನ್ನಮ್‌ ಪ್ರಭಾಕರ್‌
14 ಡಾ.ವೀರಪ್ಪ ಮೊಯಿಲಿ
15 ಎಸ್‌.ಜೋತಿಮಣಿ (ಸಂಸದೆ)
16 ಶ್ರೀಕಾಂತ್‌ ಜೇನಾ
17 ಕಮಲೇಶ್ವರ್‌ ಪಟೇಲ್‌
18 ಅಜಯ್‌ ಕುಮಾರ್‌ ಲಲ್ಲು
19 ಸುಭಾಷಿಣಿ ಯಾದವ್‌
20 ಅಡೂರು ಪ್ರಕಾಶ್‌ (ಸಂಸದ)
21 ಧನೇಂದ್ರ ಸಾಹು
22 ಹೀನಾ ಕಾವ್ರೆ
23 ಡಾ.ಅನಿಲ್‌ ಜೈಹಿಂದ್-‌ ಸಲಹಾ ಮಂಡಳಿಯ ಸಂಚಾಲಕರು
24 ಜಿತೇಂದರ್‌ ಬಘೇಲ್-‌ ಸಲಹಾ ಮಂಡಳಿಯ ಕಾರ್ಯದರ್ಶಿ