ಗಾಜಾ:- ನಗರದ ಗ್ರೀಕ್ ಆರ್ಥೊಡಾಕ್ಸ್ ಸೇಂಟ್ ಪೋರ್ಫಿರಿಯಸ್ ಚರ್ಚ್‌ನಲ್ಲಿ ನಡೆದ ಹೋಲಿ ಫ್ಯಾಮಿಲಿ ಚರ್ಚ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ ಪ್ಯಾಲೆಸ್ಟೀನಿಯನ್ ಕ್ರಿಶ್ಚಿಯನ್ನರಾದ ಸಾದ್ ಸಲಾಮಾ ಮತ್ತು ಫೌಮಿಯಾ ಅಯ್ಯದ್ ಅವರ ಅಂತ್ಯಕ್ರಿಯೆಯಲ್ಲಿ ಕುಟುಂಬದ ಸದಸ್ಯರು ಹಾಗೂ ಶೋಕತಪ್ತರು ಭಾಗವಹಿಸಿದ್ದಾರೆ.
ಗಾಜಾದ ಏಕೈಕ ಕ್ಯಾಥೋಲಿಕ್ ಚರ್ಚ್‌ಗೆ ಸಂಭವಿಸಿದ ತಪ್ಪಾದ ದಾಳಿಯಲ್ಲಿ ಜೀವಹಾನಿಗೆ ಇಸ್ರೇಲ್ ತೀವ್ರವಾಗಿ ವಿಷಾದಿಸುತ್ತದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರದಂದು ಹೇಳಿದ್ದಾರೆ.
ಗಾಜಾದ ಹೋಲಿ ಫ್ಯಾಮಿಲಿ ಚರ್ಚ್‌ಗೆ ಅಚಾನಕ್ಕಾಗಿ ಗುಂಡುಗಳು ಬಡಿದಿದ್ದಕ್ಕೆ ಇಸ್ರೇಲ್ ತೀವ್ರವಾಗಿ ವಿಷಾದಿಸುತ್ತದೆ. ಕಳೆದುಹೋದ ಪ್ರತಿಯೊಂದು ಮುಗ್ಧ ಜೀವವೂ ದುರಂತ ಎಂದ ನೆತನ್ಯಾಹು, ತನಿಖೆ ನಡೆಯುತ್ತಿದೆ ಮತ್ತು ಇಸ್ರೇಲ್ ನಾಗರಿಕರು ಮತ್ತು ಪವಿತ್ರ ಸ್ಥಳಗಳನ್ನು ರಕ್ಷಿಸಲು ಬದ್ಧವಾಗಿದೆ ಎಂದು ಹೇಳಿದರು.
Leave feedback about this