ಚಿಕ್ಕಮಗಳೂರು:- ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಅಭಿನವ ಪ್ರತಿಭಾ ವೇದಿಕೆ, ರಕ್ತದಾನಿಗಳ ಬಳಗದ ವತಿಯಿಂದ ಜಿಲ್ಲೆಯ ಎನ್. ಆರ್.ಪುರದ ಬಸ್ಟ್ಯಾಂಡ್ ಆವರಣದ ಆಟೋ ನಿಲ್ದಾಣದಲ್ಲಿ ಆಯೋಜಿಸಿದ್ದ 33ನೇ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಶಿವಮೊಗ್ಗ ದ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್ ಅಪ್ಪಾಜಿ ನೆರವೇರಿಸಿ ಮಾತನಾಡುತ್ತಾ, ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಇಲ್ಲಿ ಪಡೆದ ರಕ್ತವನ್ನು ಎಲ್ಲ ರೀತಿಯ ಟೆಸ್ಟ್ ಮಾಡಿ ತುರ್ತು ಅವಶ್ಯಕತೆ ಇರುವವರಿಗೆ ನೀಡಲಾಗುತ್ತದೆ 18 ವರ್ಷ ಮೇಲ್ಪಟ್ಟ 64 ವರ್ಷದ ಒಳಗಿನ ಆರೋಗ್ಯವಂತ ಪುರುಷ ಮಹಿಳೆಯರು ರಕ್ತದಾನ ಮಾಡಬಹುದು ಎಂದರು.
ದಾಖಲೆಯ 103 ಬಾರಿ ರಕ್ತದಾನ ಮಾಡಿರುವ ಅಭಿನವ ಗಿರಿರಾಜ್ ರವರಿಗೆ ರೆಡ್ ಕ್ರಾಸ್ ಸಂಸ್ಥೆಯಿಂದ “ಡೈಮಂಡ್ ಕಾರ್ಡ್” ಗೌರವ ಸ್ವೀಕರಿಸಿ ಪ್ರಾಸ್ತವಿಕವಾಗಿ ಮಾತನಾಡಿ, ಇದು 33ನೇ ರಕ್ತದಾನ ಶಿಬಿರವಾಗಿದ್ದು ಇದುವರೆಗಿನ 66 ಯುನಿಟ್ ರಕ್ತ ಸಂಗ್ರಹಣೆ ದಾಖಲೆ ನಮ್ಮ ಆಯೋಜನೆಯಲ್ಲಾಗಿದೆ. ಜೊತೆಗೆ ತುರ್ತು ಅವಶ್ಯಕತೆ ಈಗಾಗಲೇ 800ಕ್ಕೂ ಅಧಿಕ ಯುನಿಟ್ ರಕ್ತ ದೊರಕಿಸಿಕೊಟ್ಟಿದ್ದೇವೆ ಎಂದರು.
ಕರವೇ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್ ಮಾತನಾಡಿ, ನಾವು ರಕ್ತದಾನ ಮಾಡುತ್ತಿದ್ದೇವೆ ಎಲ್ಲರೂ ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ಶಿಬಿರ ಆಯೋಜನೆ ಮಾಡಿರುವ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು.
ರಕ್ತದಾನಿ ಬಳಗದ ಅಜೇಯ್, ಜೇಸಿ ಕಾರ್ಯದರ್ಶಿ ಮಿಥುನ್, ಆಟೋ ಸಂಘದ ಗೌರವಧ್ಯಕ್ಷ ಅಣ್ಣಪ್ಪ, ರೆಡ್ ಕ್ರಾಸ್ ಸಂಸ್ಥೆಯ ಪಿ.ಸಿ. ಓ. ಶ್ರುತಿ, ಜೇಸಿ ಅಧ್ಯಕ್ಷ ಸಾರ್ಥಕ್, ಆಟೋ ಸಂಘದ ಅಧ್ಯಕ್ಷ ಮಧು, ಛಾಯಾಗ್ರಾಹಕ ಸಂಘದ ಅಧ್ಯಕ್ಷ ವಿಜು, ಕಾರ್ಯದರ್ಶಿ ಸಮೀರ್, ಪರಸ್ಪರ ಮಾನವತಾ ವೇದಿಕೆಯ ಅರ್ಜುನ್, ನೌಕರರ ಸಂಘದ ಅಧ್ಯಕ್ಷ ಹೆಚ್.ಮಂಜುನಾಥ್, ತಾಲ್ಲೂಕು ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಮಂಜು ಎನ್.ಗೌಡ ಇತರರು ಉಪಸ್ಥಿತರಿದ್ದರು.
13 ಜನ ಮಹಿಳೆಯರು, ಮೊದಲ ಬಾರಿ ರಕ್ತದಾನ ಮಾಡಿದ 15 ಯುವಕರು ಸೇರಿ ಒಟ್ಟು 52 ಯುನಿಟ್ ರಕ್ತ ಸಂಗ್ರಹಣೆ ಆಗಿದೆ.
ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್ ಅಪ್ಪಾಜಿ 100 ಕ್ಕೂ ಅಧಿಕ ಬಾರಿ ರಕ್ತ ನೀಡಿರುವವರಿಗೆ ನೀಡುವ ಡೈಮಂಡ್ ಕಾರ್ಡ್ ಸ್ಪೆಷಲ್ ಗೌರವವನ್ನು ಕಾರ್ಡ್ ನೀಡುವುದರೊಂದಿಗೆ ಪುರಸ್ಕಾರಿಸಿದರು.