ಟೆಹ್ರಾನ್:- ಇಸ್ರೇಲ್ & ಇರಾನ್ ನಡುವೆ ಪೂರ್ಣ ಪ್ರಮಾಣದ ಯುದ್ಧ ಶುರುವಾಗಿ ಇಡೀ ಜಗತ್ತು ಸರ್ವನಾಶವಾಗಿ ಹೋಗುವ ಮುನ್ಸೂಚನೆ ಸಿಕ್ಕಿದೆ. ಯಾಕೆಂದರೆ ಈಗ ಇರಾನ್ ಕೈಯಲ್ಲಿ ಅಣ್ವಸ್ತ್ರಗಳು ಇವೆ, ಹಾಗೇ ಇಸ್ರೇಲ್ ಕೂಡ ಅಮೆರಿಕ ಸೇನೆಯ ಬೆಂಬಲ ಪಡೆದು ನ್ಯೂಕ್ಲಿಯರ್ ಅಂದ್ರೆ ಪರಮಾಣು ಬಾಂಬ್ನ ಹಾಕುವ ಸಾಮರ್ಥ್ಯ ಹೊಂದಿದೆ. ಇದೇ ಕಾರಣಕ್ಕೆ ಈಗ ಆತಂಕ ಹೆಚ್ಚಾಗಿದ್ದು, ಇಸ್ರೇಲ್ & ಇರಾನ್ ನಡುವಿನ ಯುದ್ಧದಲ್ಲಿ ಈಗ ಯಾರು ಯಾರ ಪರವಾಗಿ ಇದ್ದಾರೆ? ಅನ್ನೋ ಮಾತಿಗಿಂತ ಇರಾನ್ ದೇಶಕ್ಕೆ ಬೆಂಬಲ ಕೊಡುತ್ತಿರುವ ಅಷ್ಟೂ ದೇಶಗಳ ಪಟ್ಟಿ ಒಮ್ಮೆ ಕಣ್ಣುಹಾಯಿಸೋಣ.
ಇಸ್ರೇಲ್ ಬೆನ್ನಿಗೆ ಪಾಶ್ಚಿಮಾತ್ಯ ದೇಶಗಳು & ಅಮೆರಿಕದ ಸರ್ಕಾರ ಕೂಡ ನಿಂತಿದ್ದು, ಕುತೂಹಲ ಡಬಲ್ ಮಾಡಿದೆ. ಇರಾನ್ ಇದೀಗ ಇಸ್ರೇಲ್ ವಿರುದ್ಧ ಘೋರವಾಗಿ ದಾಳಿ ಮಾಡುತ್ತಿದ್ದು, ಈಗಾಗಲೇ ಹಲವಾರು ನಗರದಲ್ಲಿ ನರಕ ನಿರ್ಮಾಣವಾಗಿದೆ. ಇಂತಹ ಸಮಯದಲ್ಲೇ ಮತ್ತೊಂದು ಆಘಾತ ಕೂಡ ಎದುರಾಗಿದೆ, ಇರಾನ್ ಸೇನೆಯಿಂದ ದಿಢೀರ್ ಪರಮಾಣು ಪರೀಕ್ಷೆ ನಡೆದಿರುವ ಕುರಿತು ಸಾಕ್ಷ್ಯ ಸಿಕ್ಕಿದೆ. ಹೀಗೆ ಪರಮಾಣು ಬಾಂಬ್ ಪರೀಕ್ಷೆಯ ಮುನ್ಸೂಚನೆ ಸಿಕ್ಕ ತಕ್ಷಣ ಅಮೆರಿಕ ಸೇನೆ ಕೂಡ ಯುದ್ಧಕ್ಕೆ ಭಾರಿ ಭರ್ಜರಿ ಎಂಟ್ರಿಯನ್ನ ಕೊಟ್ಟು ದಾಳಿ ಮಾಡಿದೆ. ಈ ಮೂಲಕ 3ನೇ ಮಹಾಯುದ್ಧ ಶುರುವಿಗೆ ಕ್ಷಣಗಣನೆ ಆರಂಭದ ಮುನ್ಸೂಚನೆ ಅಂತಾನೇ ಇದೀಗ ಚರ್ಚೆ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ಇರಾನ್ ಬೆಂಬಲಕ್ಕೂ ಹಲವು ದೇಶಗಳು ನಿಂತು ಸಪೋರ್ಟ್ ಮಾಡುತ್ತಿವೆ.
ಇರಾನ್ ಬೆನ್ನಿಗೆ ನಿಂತ ದೇಶಗಳು:
ರಷ್ಯಾ ಸೇರಿದಂತೆ ಹಲವು ದೇಶಗಳು ಇರಾನ್ ಬೆನ್ನಿಗೆ ನಿಂತಿವೆ. ಈ ಪೈಕಿ, ರಷ್ಯಾ ಹೊರತುಪಡಿಸಿ ಚೀನಾ ಮತ್ತು ಉತ್ತರ ಕೊರಿಯಾ ದೇಶಗಳು ಇರಾನ್ ಬೆನ್ನಿಗೆ ನಿಂತಿವೆ. ವೆನಿಜುವೆಲಾ, ಬೆಲಾರಸ್, ಯೆಮನ್ & ಸಿರಿಯಾ ಸೇರಿ ಲೆಬನಾನ್ ದೇಶಗಳು ಇದೀಗ ಇರಾನ್ ಸೇನೆಗೆ ಬೆಂಬಲ ನೀಡುತ್ತಿವೆ. ಪಾಕಿಸ್ತಾನ ಕೂಡ ಇರಾನ್ ಬೆಂಬಲಿಸುತ್ತೇನೆ ಅಂತಾ ಸುಳ್ಳು ಹೇಳಿದರೂ, ನವರಂಗಿ ಆಟ ಆಡುವ ಪಾಕಿಸ್ತಾನದ ಈ ಮಾತನ್ನು ಇರಾನ್ ನಂಬುವುದಿಲ್ಲ ಎನ್ನಬಹುದು. ಒಟ್ನಲ್ಲಿ ಹೀಗೆ ಇರಾನ್ ಬೆಂಬಲಕ್ಕೆ ಕೂಡ ಹಲವಾರು ಘಟಾನುಘಟಿ ದೇಶಗಳು ನಿಂತಿರುವುದು ಕುತೂಹಲ ಕೆರಳಿಸಿದೆ.