ಬೆಂಗಳೂರು

9ನೇ ಕಾಲ್ತುಳಿತ: ಸಾವಿನ ಸಂಖ್ಯೆ ಎಷ್ಟು ಗೊತ್ತೆ

ಬೆಂಗಳೂರು:- ವಿಜಯೋತ್ಸವದ ಅಂಗವಾಗಿ ಜೂನ್‌ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಟ್ರೋಫಿ ಸಂಭ್ರಮಾಚರಣೆ ವೇಳೆ ಕ್ರೀಡಾಂಗಣದ ಹೊರಗೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇದು ಕಳೆದ 365 ದಿನಗಳಲ್ಲಿ ನಡೆದ 9ನೇ ಕಾಲ್ತುಳಿತವಾಗಿದ್ದು, ಎಲ್ಲಾ ಕಾಲ್ತುಳಿತ ಪ್ರಕರಣಗಳೂ ಸೇರಿ ಸಾವಿನ ಸಂಖ್ಯೆ 150ಕ್ಕೂ ಮೀರಿದೆ.

ಕಳೆದ 365 ದಿನಗಳಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಗಳು ಯಾವುದು, ಆ ಅವಘಡಗಳಲ್ಲಿ ಎಷ್ಟು ಜನರು ಸಾವನ್ನಪ್ಪಿದರು ಎಂಬ ಮಾಹಿತಿ ನಿಮ್ಮ ಮುಂದೆ.

ಉತ್ತರ ಪ್ರದೇಶದ ಹತ್ರಾಸ್‌ನ ಭೋಲೆ ಬಾಬಾ ಸತ್ಸಂಗ್‌ನಲ್ಲಿ 2024ರ ಜುಲೈ 2ರಂದು ನಡೆದ ಕಾಲ್ತುಳಿತದಲ್ಲಿ 121 ಮಂದಿ ಸಾವಿಗೀಡಾದರು.

ಬಿಹಾರ್‌ನ ಬಾಬಾ ಸಿದ್ಧಾರ್ಥ್‌ ದೇವಸ್ಥಾನದಲ್ಲಿ 2024ರ ಆಗಸ್ಟ್‌ 12ರಂದು ನಡೆದ ಕಾಲ್ತುಳಿತದಲ್ಲಿ 7 ಜನರ ಸಾವು.

ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ 2024ರ ಅಕ್ಟೋಬರ್‌ 27ರಂದು ನಡೆದ ಕಾಲ್ತುಳಿತದಲ್ಲಿ ಯಾವುದೇ ಸಾವು ಸಂಭವಿಸಿರಲಿಲ್ಲ.

ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ 2024ರ ಡಿಸೆಂಬರ್‌ 4ರಂದು ಪುಷ್ಪ ಚಿತ್ರದ ಪ್ರೀಮಿಯರ್‌ ಶೋ ವೇಳೆ ನಡೆದಿದ್ದ ಕಾಲ್ತುಳಿತದಲ್ಲಿ 1 ಸಾವಾಗಿತ್ತು.

ಆಂಧ್ರ ಪ್ರದೇಶದ ತಿರುಪತಿಯಲ್ಲಿ 2025ರ ಜನವರಿ 8ರಂದು ನಡೆದ ವೈಕುಂಠ ಏಕಾದಶಿ ಹಬ್ಬದಂದು ಸಂಭವಿಸಿದ ಕಾಲ್ತುಳಿತದಲ್ಲಿ 6 ಸಾವು ಸಂಭವಿಸಿದೆ.

2025ರ ಜನವರಿ 29ರಂದು ನಡೆದ ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಭಕ್ತಾದಿಗಳ ಸಾವಾಗಿದೆ.

ಇದೇ ವರ್ಷದ ಫೆಬ್ರವರಿ 15ರಂದು ದೆಹಲಿಯ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತದಲ್ಲಿ 18 ಸಾವು.

ಗೋವಾದ ಶಿರ್‌ಗಾವ್‌ ಗ್ರಾಮದಲ್ಲಿ 2025ರ ಮೇ 3ರಂದು ನಡೆದ ಕಾಲ್ತುಳಿತದಲ್ಲಿ 6 ಸಾವು ಸಂಭವಿಸಿದ ವರದಿಯಾಗಿದೆ.