Uncategorized

ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ ಹೊಸ ಶಾಕ್

ಹಾಸನ:- ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲು ಹಕ್ಕಿಯಾಗಿ ಒಂದು ವರ್ಷ ಸಂದಾಗಿದೆ, ಜೊತೆ ಜೊತೆಗೆ ಹೊಸ ತಲೆನೋವುಂದಾಗಿ ಶಾಕ್ ಆಗಿದ್ದಾರೆ. ಪ್ರಜ್ವಲ್‌ ಪರ ವಕೀಲ ಜಿ.ಅರುಣ್‌ ಅವರು ವಕಾಲತ್ತಿನಿಂದ ನಿವೃತ್ತಿ ಹೊಂದಿ ಜಡ್ಜ್​​​​ ಅವರಿಗೆ ಮೆಮೋ ಸಲ್ಲಿಕೆ ಮಾಡಿದ್ದಾರೆ. ಆದ್ದರಿಂದ ತನಗೆ ಹೊಸ ವಕೀಲರನ್ನು ನೇಮಿಸಿಕೊಳ್ಳಲು ಸಮಯ ನೀಡುವಂತೆ ಪ್ರಜ್ವಲ್ ರೇವಣ್ಣ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಹೆಚ್ಚು ಸಮಯ ನೀಡಲ್ಲ, ಇಂದು ನೇಮಿಸಿಕೊಳ್ಳಲು ಮಾತ್ರ ಅವಕಾಶ ನೀಡುವುದಾಗಿ ಕೋರ್ಟ್ ಹೇಳಿದೆ. ಇದರಿಂದ ಪ್ರಜ್ವಲ್ ರೇವಣ್ಣಗೆ ಮತ್ತೆ ಶಾಕ್ ಆಗಿದೆ.

ಪ್ರಜ್ವಲ್​​​​​ ಕೇಸ್​​​​ನಲ್ಲಿ ವಕೀಲ ಜಿ ಅರುಣ್ ಅವರು ವಕಾಲತ್ತಿನಿಂದ ನಿವೃತ್ತಿ ಪಡೆದಿರುವ ಕಾರಣಕ್ಕೆ ಹೊಸ ವಕೀಲರನ್ನು ನೇಮಿಸಿಕೊಳ್ಳಲು ಪ್ರಜ್ವಲ್ ಗೆ ಹೆಚ್ಚು ಕಾಲಾವಕಾಶ ನೀಡಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿರಾಕರಿಸಿದೆ. ಇದೀಗ ಪುತ್ರನ ಪರವಾಗಿ ಭವಾನಿ ರೇವಣ್ಣಗೆ ಕೋರ್ಟ್ ಗೆ ಹಾಜರಾಗಿ ಮನವಿ ಮಾಡಿದ್ದಾರೆ. ಇಂದು ನೇಮಿಸಿಕೊಳ್ಳಲು ಮಾತ್ರ ಅವಕಾಶ ಎಂದು ಕೋರ್ಟ್ ಕಡ್ಡಿಮುರಿದಂತೆ ತಿಳಿಸಿದೆ.

ಪ್ರಜ್ವಲ್‌ ವಿರುದ್ಧದ ಪ್ರಕರಣದ ವಿಚಾರಣೆಯಿಂದ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​​​​​​​​​​​​​​ನ ನ್ಯಾಯಾಧೀಶ ಗಜಾನನ ಭಟ್‌ ಅವರನ್ನು ಬದಲಿಸುವಂತೆ ಪ್ರಜ್ವಲ್‌ ಪರ ವಕೀಲರು ಕೋರಿದ್ದ ಜ್ಞಾಪನಾ ಪತ್ರ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಕಳೆದ ಬುಧವಾರ ತಿರಸ್ಕರಿಸಿದ್ದರು. ಈ ಬೆಳವಣಿಗೆ ನಂತರದಲ್ಲಿ ಅರುಣ್‌ ಅವರು ವಕಾಲತ್ತಿನಿಂದ ನಿವೃತ್ತಿ ಹೊಂದಿ ಜಡ್ಜ್ ಅವರಿಗೆ ಮೆಮೋ ಸಲ್ಲಿಸಿದ್ದರು. 2024ರ ಏ.22ರಂದು ಪ್ರಜ್ವಲ್ ಗೆ ಸಂಬಂಧಿಸಿದ ಅಶ್ಲೀಲ ವೀಡಿಯೊಗಳು ಸೋಷಿಯಲ್​​​​​​ ಮೀಡಿಯಾಗಳಲ್ಲಿ ವೈರಲ್ ಆಗತೊಡಗಿದವು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಈ ವೀಡಿಯೊಗಳಲ್ಲಿ ಕಾಣಿಸಿಕೊಂಡವರು ಈವರೆಗೂ ಚೇತರಿಸಿಲ್ಲ ಎಂದು ವರದಿಯಾಗಿದೆ.