ಚಿಕ್ಕಮಗಳೂರು:- ಜಿಲ್ಲೆಯ ನರಸಿಂಹರಾಜಪುರದಲ್ಲಿ ಮೇ ತಿಂಗಳ 20, 21 ಹಾಗೂ 22 ಅಂದರೆ ಮೂರು ದಿನಗಳ ಕಾಲ ನಡೆಯಲಿರುವ ಕೋಟೆ ಶ್ರೀ ಮಾರಿಕಾಂಭ ಜಾತ್ರೆಯಲ್ಲಿ ನಿರ್ಮಾಣ ಮಾಡಲಿರುವ ವಿಗ್ರಹಕ್ಕೆ ಬಳಸುವ ವೃಕ್ಷವನ್ನು ಸಕಲ ಸಂಪ್ರದಾಯದೊಂದಿಗೆ ವಿಧಿ ವಿಧಾನಗಳೊಂದಿಗೆ “ಪುರ” ಪ್ರವೇಶ ಮಾಡಲಾಯಿತು.
ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಭ ಜಾತ್ರೆಯಲ್ಲಿ ಪೂಜೆಗೆ ಕೂರಿಸುವ ವಿಗ್ರಹ ನಿರ್ಮಾಣಕ್ಕೆ ಬಳಸುವ ಎತ್ತಗದ ವೃಕ್ಷವನ್ನು ಪ್ರತಿ ಬಾರಿಯಂತೆ ಈ ಬಾರಿಯು ಮಂಗಳ ವಾದ್ಯಗಳೊಂದಿಗೆ ಅದ್ದೂರಿಯಾಗಿ ರಾಜಬೀದಿ ಮೆರವಣಿಗೆಯಲ್ಲಿ ತರಲಾಯಿತು.
ಜಾತ್ರಾ ಸಮಿತಿ ಅಧ್ಯಕ್ಷರಾದ ಪಿ.ಆರ್.ಸದಾಶಿವ ಸೇರಿದಂತೆ ಪದಾಧಿಕಾರಿಗಳು ಮತ್ತು ಭಕ್ತಾಧಿಗಳು ಸೇರಿ ಗಧಿಗೆಯಲ್ಲಿ ಪೂಜೆ ನೆರವೇರಿಸಿ ವೃಕ್ಷ ತರುವುದಕ್ಕೆ ತೆರಳಿದರು.
ಈ ಕಾರ್ಯಕ್ರಮದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕರಾರ ಟಿ.ಡಿ. ರಾಜೇಗೌಡರು, ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಶೆಟ್ಟಿ, ಸುಕುಮಾರ್, ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್ ಶೆಟ್ಟಿ, ಸುನಿಲ್, ಕಾರ್ತಿಕ್ ಮರುಳಪ್ಪ, ರವಿ ಹಾಗೂ ಭಕ್ತಾಧಿಗಳು ಪಾಲ್ಗೊಂಡಿದ್ದರು.