ಬೆಂಗಳೂರು:- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರ ವಿವಾದಾತ್ಮಕ ಹೇಳಿಕೆಗಳ ವಿಚಾರದಲ್ಲಿ ಎಂ.ಬಿ.ಪಾಟೀಲ್‌ರನ್ನು ಟೀಕಿಸಿದ್ದರು. ಬಸವಣ್ಣನವರು ಜನ್ಮತಾಳಿದ ನಾಡಿನಲ್ಲಿ ಅಶ್ಲೀಲ ಪದಗಳ ಬಳಕೆ ಸರಿಯಲ್ಲ. ಮೊಹಮ್ಮದ್ ಪೈಗಂಬರ್ ಬಗ್ಗೆ ಯತ್ನಾಳ್‌ರ ಹೇಳಿಕೆ ತಪ್ಪು ಎಂದು ನಾನು ಈಗಾಗಲೇ ಖಂಡಿಸಿದ್ದೇನೆ. ಆದರೆ, ಯತ್ನಾಳ್‌ರಂತಹವರು ಈ ರೀತಿ ಮಾತನಾಡಲು ಪ್ರೇರಣೆ ನೀಡಿದವರು ಎಂ.ಬಿ.ಪಾಟೀಲ್. ಅವರು ಯತ್ನಾಳ್‌ಗೆ ಹೊಗಳಿಕೆಯ ಮಾತುಗಳನ್ನು ಕಲಿಸಿದ್ದಾರೆ ಎಂದು ಬೆಂಗಳೂರಿನಲ್ಲಿ ಶಿವಾನಂದ ಪಾಟೀಲ್ ಆರೋಪಿಸಿದ್ದರು.
ಈ ಹೇಳಿಕೆಗೆ ಎಂ.ಬಿ.ಪಾಟೀಲ್, ನನಗೆ ಹೇಳಲು ನೀವು ಯಾರು, ನಿಮ್ಮ ಉದ್ದೇಶವೇನು, ಮುಸ್ಲಿಂ ಸಮುದಾಯದಲ್ಲಿ ನನ್ನ ಬಗ್ಗೆ ತಪ್ಪು ಸಂದೇಶ ಹರಡಲು ಯತ್ನಿಸುತ್ತಿದ್ದೀರಾ ಎಂದು ಸಚಿವ ಶಿವಾನಂದ ಪಾಟೀಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಾನಂದ ಪಾಟೀಲ್‌ಗೆ ಎಲ್ಲವೂ ಗೊತ್ತಿತ್ತು. ಬೆಳಗಾವಿಯಲ್ಲಿ ನಮ್ಮ ಪಕ್ಷದ ಪ್ರತಿಭಟನೆ ಇದ್ದಾಗ, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರೂ ಸಭೆಗೆ ಬರಬೇಕೆಂದು ಒತ್ತಾಯಿಸುವುದು ತಪ್ಪು. ಈ ವಿಷಯವನ್ನು ನಾನು ಪಕ್ಷದ ವರಿಷ್ಠರು, ಹೈಕಮಾಂಡ್ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ನನ್ನ ತಂದೆ ಶಾಸಕರಾಗಿದ್ದಾಗ ಮುಸ್ಲಿಂ ಸಮುದಾಯಕ್ಕಾಗಿ ತುಂಬಾ ಕೆಲಸ ಮಾಡಿದ್ದಾರೆ. ಈಗ ನಾನು ಶಾಸಕನಾಗಿದ್ದೇನೆ. ಆದರೂ, ನನ್ನ ವಿರುದ್ಧ ತಪ್ಪು ಸಂದೇಶ ಹರಡಲು ಶಿವಾನಂದ ಪಾಟೀಲ್ ಯತ್ನಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಮಾತು ಮುಂದುವರೆಸಿ ಆ ದಿನ ನಾನು ಮುಸ್ಲಿಂ ಸಮುದಾಯದ ಪ್ರತಿಭಟನೆಗೆ ಹೋಗಿರಲಿಲ್ಲ, ಅದಕ್ಕೂ ಮೊದಲೇ ಶಿವಾನಂದ ಪಾಟೀಲ್‌ಗೆ ಭೇಟಿಯಾಗಿ, ಸಭೆಗೆ ಬರಲಾಗದ ಬಗ್ಗೆ ತಿಳಿಸಿದ್ದೆ. ನನ್ನ ಸಹೋದರನನ್ನು ಕಳುಹಿಸಿದ್ದೆ. ನಾವಿಬ್ಬರು ಒಂದೇ ಪಕ್ಷದಲ್ಲಿದ್ದೇವೆ, ಬೇರೆಯವರಂತೆ ಅಲ್ಲ. ಶಿವಾನಂದ ಪಾಟೀಲ್ ಈ ರೀತಿ ಮಾಡಬಾರದು. ಒಂದೇ ಪಕ್ಷದಲ್ಲಿದ್ದು, ಒಗ್ಗಟ್ಟಾಗಿ ಯತ್ನಾಳ್ ವಿರುದ್ಧ ಹೋರಾಡೋಣ. ಅವರಿಗೆ ತಕ್ಕ ಪಾಠ ಕಲಿಸೋಣ ಎಂದು ಕರೆ ನೀಡಿದರು.
ಈಗಾಗಲೇ ಎಂ.ಬಿ.ಪಾಟೀಲ್ ವಿಚಾರವಾಗಿ ಯತ್ನಾಳ್ ಗೆಲ್ಲಲು ಪರೋಕ್ಷವಾಗಿ ಎಂ.ಬಿ.ಪಾಟೀಲ್ ಎಂದು ಮುಸ್ಲಿಮ್ ಸಂಘಟನೆ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಗೊಣಗಾಡುವುದು ಈಗ ಜಗಜ್ಜಾಹೀರಾಗಿದೆ.