ಬೆಂಗಳೂರು

ಸಂಸದ ಪಿ.ಸಿ ಮೋಹನ್​ ತಮ್ಮ ಎಕ್ಸ್ ಖಾತೆ​​​ ಮೂಲಕ ಕಾಂಗ್ರೆಸ್ ನಾಯಕರಿಗೆ ಕುಟುಕು

ಬೆಂಗಳೂರು:- ಸಂಸದರಾದ ಪಿ.ಸಿ ಮೋಹನ್​ ಅವರು ತಮ್ಮ ಎಕ್ಸ್ ಖಾತೆ​​​ ಮೂಲಕ ಜಿಹಾದಿಗಳು ಸುಹಾಸ್ ಶೆಟ್ಟಿಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಸುಹಾಸ್​ ಶೆಟ್ಟಿ ಮನೆಗೆ ಒಬ್ಬ ಕಾಂಗ್ರೆಸ್ ನಾಯಕನೂ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಆದರೆ, ಸುಹಾಸ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆದಿಲ್‌ನನ್ನು ಭೇಟಿ ಮಾಡಲು ಅವರಿಗೆ ಸಮಯ ಸಿಕ್ಕಿದೆ ಎಂದು ಎಂಎಲ್​​ಸಿಗಳಾದ ಬಿ.ಕೆ.ಹರಿಪ್ರಸಾದ್​​, ಮಂಜುನಾಥ್ ಭಂಡಾರಿ, ಮಾಜಿ ಸಚಿವ ರಮನಾಥ್ ರೈ ಮುಂತಾದ ಕಾಂಗ್ರೆಸ್ ಮುಖಂಡರು ಆದಿಲ್ ಮನೆಗೆ ಭೇಟಿ ನೀಡಿರುವ ಫೋಟೋವನ್ನು ಶೇರ್ ಮಾಡಿ ಕುಟುಕಿದ್ದಾರೆ.

ಮತ ಬ್ಯಾಂಕ್‌ಗಳು ಚಾಲಕನ ಸ್ಥಾನದಲ್ಲಿರುವಾಗ ನ್ಯಾಯವು ಹಿಂದೆ ಸರಿಯುತ್ತದೆ. ಕಾಂಗ್ರೆಸ್​​​​ಗೆ ವೋಟ್​​​ ಬ್ಯಾಂಕ್ ಮುಖ್ಯ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.