Uncategorized ಚಿಕ್ಕಮಗಳೂರು

ಅಭಿನವ ಗಿರಿರಾಜ್ ರವರಿಗೆ ರಾಜ್ಯ ಕನ್ನಡ ಶ್ರೀ ಪ್ರಶಸ್ತಿ

ಚಿಕ್ಕಮಗಳೂರು:- ಜಿಲ್ಲೆಯ ಕಳಸದಲ್ಲಿ ರಾಜ್ಯ ಮಟ್ಟದ ಪ್ರಪ್ರಥಮ ಜೈನಸಾಹಿತ್ಯ ಸಮ್ಮೇಳನವು ಚಂದ್ರನಾಥ ಬಸದಿಯಲ್ಲಿ ಇತ್ತೀಚೆಗೆ ನಡೆಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ 1008 ಭಗವಾನ್ ಚಂದ್ರನಾಥಸ್ವಾಮಿ ಬಸದಿ ಜೀರ್ಣೋದ್ಧಾರ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಡೆದ ಈ ಸಮ್ಮೇಳನವು ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷ ವಿದ್ಯಾವಾಚಸ್ಪತಿ ಡಾ.ಶ್ರೀವರ್ಮ ಹೆಗ್ಗಡೆಯರು ಯಶಸ್ವಿಯಾಗಿ ನೆರವೇರಿಸಿದರು. ಕಸಾಪ ರಾಜ್ಯ ಅಧ್ಯಕ್ಷ ಮಹೇಶ್ ಜೋಷಿ, ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲೆಯ ನ.ರಾ.ಪುರದ ಕಲಾವಿದ, ನಾಟಕಕಾರ, ಗೀತೆ ರಚನೆ, ರಾಜ್ಯದ ಜಾನಪದ ಕಲಾವಿದ, ಸಮಾಜ ಸೇವಕ, ಗಾಯಕ, ರಕ್ತದಾನದಲ್ಲಿ ದಾಖಲೆ ನಿರ್ಮಿಸಿ ಅಭಿನವ ಪ್ರತಿಭಾ ವೇದಿಕೆಯ ಮುಖ್ಯಸ್ಥರಾದ ಜೇಸಿ “ಅಭಿವನ ಗಿರಿರಾಜ್” ರವರಿಗೆ ಸಮ್ಮೇಳನದಲ್ಲಿ ರಾಜ್ಯ ಮಟ್ಟದ ‘ಕನ್ನಡ ಶ್ರೀ’ ನೀಡಿ ಗೌರವಿಸಲಾಯಿತು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವು ಗಣ್ಯರಿಗೆ ಸನ್ಮಾನಿಸಲಾಯಿತು.