ವಿಜಯಪುರ

ರಾಜ್ಯದಲ್ಲಿ ಸಿದ್ದರಾಮಯ್ಯ ಬಳಿಕ ನಾನೇ ಜನಪ್ರಿಯ ನಾಯಕ.- ಯತ್ನಾಳ್

ವಿಜಯಪುರ:- ಶಾಸಕ ಯತ್ನಾಳ್ ಬಿಜೆಪಿ ಪಕ್ಷದಿಂದ ಉಚ್ಛಾಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಚ್ಚಾಟನೆಯ ಬಳಿಕ ನನ್ನ ಜನಪ್ರಿಯತೆ ಉತ್ತುಂಗಕ್ಕೆ ಏರಿದೆ. ಯತ್ನಾಳ್ ಮುಖ್ಯಮಂತ್ರಿಯಾದರೆ ರಾಜ್ಯ ಅಭಿವೃದ್ಧಿಯಾಗುತ್ತದೆ. ನೆಮ್ಮದಿಯ ಜೀವನ ಮಾಡಬಹುದೆಂಬ ವಾತಾವರಣ ಜನರಲ್ಲಿದೆ ಎಂದು ಬಿಜೆಪಿ ಉಚ್ಛಾಟಿಕ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ಬಳಿಕ ನಾನೇ ಜನಪ್ರಿಯ ನಾಯಕ, ಈ ಕುರಿತು ಗುಪ್ತಚರ ವರದಿ ಸಿದ್ದರಾಮಯ್ಯ ಅವರ ಬಳಿಗೆ ಇದೆ. ನಾನು ಬಿಜೆಪಿ ತತ್ವ ಸಿದ್ಧಾಂತ ಬಿಡಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾನೇ, ವಿಜಯಪುರದ ಬಿಜೆಪಿ ಅಭ್ಯರ್ಥಿ ಆಗಲು ಕೆಲವರು ಯತ್ನಿಸುತ್ತಿದ್ದಾರೆ. ಆದರೆ, ಮುಂದಿನ ಚುನಾವಣೆಯಲ್ಲಿ ವಿಜಯಪುರದ ಬಿಜೆಪಿ ಅಭ್ಯರ್ಥಿ ನಾನೇ ಎಂದು ತಿಳಿಸಿದ್ದಾರೆ.