ಮಂಗಳೂರು:- 2025 -26 ನೇ ಸಾಲಿನ ಶೈಕ್ಷಣಿಕ ಅವಧಿ ಇಂದಿನಿಂದ ಆರಂಭವಾಗಿದೆ, ಇಷ್ಟು ದಿನ ಬೇಸಿಗೆ ರಜೆಯ ಮಜ ಅನುಭವಿಸಿದ್ದ ಮಕ್ಕಳು ಶಾಲೆಗೆ ಹೋಗಲು ಹಠ ಹಿಡಿದು ಶಾಲೆಗೆ ಕಳುಹಿಸುವುದು ಸ್ವಲ್ಪ ಕಷ್ಟದ ಕೆಲಸವಾಗಿದೆ.
ಮಕ್ಕಳು ಶಾಲೆಗೆ ಹೋಗಲು ಗಲಾಟೆ ಮಾಡಿದರೆ ಮಕ್ಕಳಿಗೆ ಹೊಸ ಬಟ್ಟೆ , ಶೂ, ಬ್ಯಾಗ್, ಛತ್ರಿ ಕೊಡಿಸುವುರಿಂದ ಮಕ್ಕಳು ಶಾಲೆಗೆ ಬಹಳ ಖುಷಿಯಿಂದ ಹೋಗುತ್ತಾರೆ. ಶಾಲೆಯ ಹೆಸರು ಕೇಳಿದ ತಕ್ಷಣ ಮಕ್ಕಳಿಗೆ ಭಯ ಶುರುವಾಗುತ್ತದೆ, ನೀವು ಅವರನ್ನು ಶಾಲೆಗೆ ಹೋಗಲು ಮಾನಸಿಕವಾಗಿ ಸಿದ್ಧಪಡಿಸಬೇಕು.
ಶಾಲೆಯ ಬಗ್ಗೆ ಇರುವ ಭಯವನ್ನು ಮೊದಲು ತೆಗೆದು ಹಾಕಿ, ನಿಮ್ಮ ಮಗುವಿಗೆ ಊಟದ ಬಾಕ್ಸ್ ನಲ್ಲಿ ಅವರ ಇಷ್ಟದ ಆಹಾರವನ್ನು ನೀಡಿದರೆ ಅವರ ಮನಸ್ಸಿಗೆ ಸಂತೋಷವಾಗುತ್ತದೆ.
ಮಕ್ಕಳನ್ನು ಒತ್ತಾಯಪೂರ್ವಕವಾಗಿ ಏಳಿಸಬೇಡಿ, ಚಿಕ್ಕಮಕ್ಕಳಾದ್ರೆ ಹೆಚ್ಚಿನ ನಿದ್ರೆ ಅಗತ್ಯ, ಆದ್ದರಿಂದ ಬೆಳಗ್ಗೆ ಹೆಚ್ಚು ಹೊತ್ತು ನಿದ್ದೆ ಮಾಡಲು ಬಿಡಿ. ಮಗು ಶಾಲೆಗೆ ಹೋಗಲು ಅಳ್ತಿದ್ರೆ ಬೈಯಬೇಡಿ, ಹೊಡೆಯಬೇಡಿ. ಮೊದಲ ದಿನ ಮಗುವಿಗೆ ಚಾಕೊಲೇಟ್ ಅಥವಾ ಐಸ್ ಕ್ರೀಮ್ ಕೊಟ್ಟು ಖುಷಿಯಿಂದ ಕಳುಹಿಸಿಕೊಡುವುದರಿಂದ ಮಕ್ಕಳು ನಿಮ್ಮ ದಾರಿಗೆ ಬರುತ್ತಾರೆ.