ಚಿಕ್ಕಮಗಳೂರು:- ಜಿಲ್ಲೆಯ ನರಸಿಂಹರಾಜಪುರ ತಾಲೂಕು ಬಂಟರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್.ಎಲ್.ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಧರ್ಮರಾಜ್ ರವರು ಮಾತನಾಡಿ, ೨೦೦೯ ರಲ್ಲಿ ತಾಲೂಕು ಬಂಟರ ಸಂಘವನ್ನು ಪ್ರಾರಂಭಿಸಲಾಯಿತು. ಬಂಟರ ಸಮುದಾಯದಲ್ಲಿ ಬಡವರೇ ಹೆಚ್ಚಾಗಿದ್ದಾರೆ. ಬಂಟರ ಸಮುದಾಯದವರನ್ನು ಸಂಘಟಿಸಿ ಸಂಘ ರಚಿಸಲಾಯಿತು. ಬಂಟರ ಸಂಘಕ್ಕೆ ನಿವೇಶನ ಖರೀದಿ ಮಾಡಲಾಗಿದೆ. ಹೊಸ ಕಾರ್ಯಕಾರಿ ಸಮಿತಿಯವರು ಆ ನಿವೇಶನದಲ್ಲಿ ನೂತನ ಸಮುದಾಯ ಭವನ ಕಟ್ಟಬಹುದಾಗಿದೆ. ಯುವಕರು ಸಂಘವನ್ನು ಮುನ್ನೆಡಸಬೇಕು ಎಂದು ಕರೆ ನೀಡಿದರು.
ಮುಂದಿನ ಮೂರು ವರ್ಷದ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಶಾಂತ್.ಎಲ್.ಶೆಟ್ಟಿ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಬಂಟರ ಸಂಘವನ್ನು ಮುನ್ನೆಡೆಸುತ್ತೇವೆ. ಯಾವುದೇ ಸಮುದಾಯ ಅಭಿವೃದ್ದಿ ಹೊಂದಬೇಕಾದರೆ ಸಂಘಟಿತರಾಗಬೇಕು. ಒಗ್ಗಟ್ಟಿನಲ್ಲಿ ಬಲವಿದೆ, ನನಗೆ ಕೊಟ್ಟಿರುವ ಜವಬ್ದಾರಿಯನ್ನು ಎಲ್ಲರ ಸಹಕಾರದಿಂದ ನಿರ್ವಹಿಸುತ್ತೇನೆ ಎಂದರು.
ಸಭೆಯಲ್ಲಿ ಬಂಟರ ಸಮಾಜದ ಹಿರಿಯರಾದ ಲಕ್ಷ್ಮಣ ಶೆಟ್ಟಿ( ಪ್ರಶಾಂತ್ ಶೆಟ್ಟಿಯವರ ತಂದೆ) ರವೀಂದ್ರ ಶೆಟ್ಟಿ, ಸುಂದರ ಶೆಟ್ಟಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಂಟರ ಸಂಘದ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಧರ್ಮರಾಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಉದಯಶೆಟ್ಟಿ, ರಮೇಶ್ ಶೆಟ್ಟಿ, ಗಿರಿಧರ ಶೆಟ್ಟಿ ಉಪಸ್ಥಿತರಿದ್ದರು.
ಗೌರವಾಧ್ಯಕ್ಷರಾಗಿ ನಿವೃತ್ತಿ ಪೊಲೀಸ್ ಅಧಿಕಾರಿ ಧರ್ಮರಾಜ್ ಶೆಟ್ಟಿ, ಅಧ್ಯಕ್ಷರು ಪ್ರಶಾಂತ್ ಎಲ್ ಶೆಟ್ಟಿ, ಉಪಾಧ್ಯಕ್ಷರುಗಳಾಗಿ- ಸುಬ್ರಮಣ್ಯ ಶೆಟ್ಟಿ, ರಾಜ ಶೆಟ್ಟಿ, ಕಾರ್ಯದರ್ಶಿ ಮಧು ಶೆಟ್ಟಿ, ಸಹ ಕಾರ್ಯದರ್ಶಿ ಶರತ್ ಶೆಟ್ಟಿ, ಖಜಾಂಚಿ ರಮೇಶ ಶೆಟ್ಟಿ, ಮಹಿಳಾ ಉಪಾಧ್ಯಕ್ಷರು- ಅಶ್ವಿನಿ ಶೆಟ್ಟಿ, ಸುಜಾತ ಶೆಟ್ಟಿ ಕೈಮರ, ಮಹಿಳಾ ಕಾರ್ಯದರ್ಶಿಗಳು- ಸುಚಿತ್ರ ಶೆಟ್ಟಿ, ಅನಿತಾ ದಿನೇಶ್ ಶೆಟ್ಟಿ ಸಿಂಸೆ ಆಯ್ಕೆಯಾದರು.