ಚಿಕ್ಕಮಗಳೂರು

ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಜೂನ್ 14ರಂದು ಎನ್.ಆರ್.ಪುರದಲ್ಲಿ ಬೃಹತ್‌ ರಕ್ತದಾನ ಶಿಬಿರ

ಚಿಕ್ಕಮಗಳೂರು:- ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ನ.ರಾ.ಪುರದ ಅಭಿನವ ಪ್ರತಿಭಾ ವೇದಿಕೆ ಒಂದು ಹೆಜ್ಜೆ ಮುಂದೆ ಹೋಗಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಪಟ್ಟಣದ ಬಸ್ಟ್ಯಾಂಡ್ ಆವರಣದಲ್ಲಿ ದಿನಾಂಕ 14 ರ ಶನಿವಾರ ಆಯೋಜನೆ ಮಾಡಲಾಗಿದೆ ಎಂದು ಸಂಘಟನೆ ಮುಖ್ಯಸ್ಥ ಕಲಾಶ್ರೀ ಅಭಿನವ ಗಿರಿರಾಜ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ರಕ್ತದಾನಿಗಳ ಬಳಗ ಸೇರಿದಂತೆ ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರ ಶಿವಮೊಗ್ಗ, ಶ್ರೀ ಭುವನೇಶ್ವರಿ ಆಟೋ ಚಾಲಕರ ಮತ್ತು ಮಾಲೀಕರ ಸಂಘ, ತಾಲ್ಲೂಕು ಛಾಯಾಚಿತ್ರಗ್ರಾಹಕರ ಸಂಘ(ರಿ.), ಜೇಸಿ ಸಂಸ್ಥೆ, ಕ್ಷೇಮಾಭಿವೃದ್ಧಿ ಸಂಘ (ಲಿ.), ಪರಸ್ಪರ ಮಾನವತಾ ವೇದಿಕೆ, ತಾಲ್ಲೂಕು ಸರ್ಕಾರಿ ನೌಕರರ ಸಂಘ, ಅಪ್ಪು ಫ್ಯಾನ್ಸ್ ಬಳಗ, ಮೀನ್‌ಲ್ಯಾಂಪ್ ಬಳಗ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಮೆಸ್ಕಾಂ ಎನ್.ಆರ್.ಪುರ ಇವರ ಸಹಯೋಗದೊಂದಿಗೆ ಈ ರಕ್ತದಾನ ಶಿಬಿರ ನಡೆಯಲಿದೆ ಎಂದು ಹೇಳಿಕೆಯೊಂದನ್ನು ನೀಡಿದ ಅಭಿನವ ಗಿರಿರಾಜ್, ಇದು ಅಪ್ಪು ಸ್ಮರಣಾರ್ಥ ಪ್ರಯುಕ್ತ ಹಾಗೂ ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ಈ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ರಕ್ತದಾನದಿಂದ ಮಾಡುವುದರಿಂದ ಮೂರು ಜೀವ

ಉಳಿಸಬಹುದಾಗಿದೆ, ರಕ್ತದಾನ ಮಹಾದಾನ ಎಂದು ಅಭಿನವ ಗಿರಿರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9448203388-7760760208 ಸಂಪರ್ಕಿಸಿರಿ.