ನವದೆಹಲಿ:- ಸದ್ಯ ರಾಜ್ಯ ಸಚಿವ ಸಂಪುಟದಲ್ಲಿ ಒಂದು ಸ್ಥಾನ ಖಾಲಿ ಇದ್ದು, ಅದನ್ನು ಬಿ.ಕೆ ಹರಿಪ್ರಸಾದ್ಗೆ ಕೊಡುವ ಬಗ್ಗೆ ಮಾತುಕತೆ ನಡೆಯುತ್ತಿದೆಯಾದರೂ ಇದ್ಯಾವುದು ಸಿಎಂ ಸಿದ್ದರಾಮಯ್ಯ ದೆಹಲಿಯ ಭೇಟಿಯಲ್ಲಿ ಅಂತಿಮಗೊಂಡಿಲ್ಲ. ಮಂಗಳೂರು ಘಟನೆ, ಬೆಂಗಳೂರಿನಲ್ಲಿ ಭೀಕರ ಕಾಲ್ತುಳಿತದ ಬಳಿಕ ಸರ್ಕಾರದಲ್ಲಿ ಕೆಲ ಬದಲಾವಣೆ ಮಾಡಲು ಹೈಕಮಾಂಡ್ ಒಲವು ತೋರಿದೆ.
ಕೆಲ ಸಚಿವರು ಖಾತೆ ಬದಲಾವಣೆಯ ಪಟ್ಟು ಹಿಡಿದವರಲ್ಲಿ ಮೊದಲಿಗರು ಜಿ.ಪರಮೇಶ್ವರ್ ಗೃಹ ಖಾತೆಯಿಂದ ಮುಕ್ತಿ ಕೇಳುತ್ತಿದ್ದಾರೆ. ಅವರಿಗೆ ಕಣ್ಣು ಸಮಾಜ ಕಲ್ಯಾಣ ಇಲಾಖೆಯತ್ತ ಒಲವು ಇದೆಯೆಂದು ಹೇಳಲಾಗುತ್ತಿದೆ, ಒಂದು ವೇಳೆ ಹೈಕಮಾಂಡ್ ಒಪ್ಪಿದರೆ ಖಾತೆ ಅದಲು ಬದಲಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ದಿನೇಶ್ ಗುಂಡೂರಾವ್ ಮಂಗಳೂರು ಉಸ್ತುವಾರಿ ಸ್ಥಾನ ಬೇಡ ಎನ್ನುತ್ತಿದ್ದಾರೆ.
ಮಂತ್ರಿಗಿರಿ ಮೇಲೆ ಕಣ್ಣಿಟ್ಟವರು ಬಳ್ಳಾರಿಯ ಬಿ.ನಾಗೇಂದ್ರ, ಶೃಂಗೇರಿ ಕ್ಷೇತ್ರದ ರಾಜೇಗೌಡ, ಸಲೀಂ ಅಹಮದ್, ಅರಸೀಕೆರೆಯ ಕೆ.ಎಂ ಶಿವಲಿಂಗೇಗೌಡ, ಅಥಣಿಯ ಲಕ್ಷ್ಮಣ ಸವದಿ, ಆಳಂದದ ಬಿ.ಆರ್ ಪಾಟೀಲ್, ಮಳವಳ್ಳಿಯ ನರೇಂದ್ರ ಸ್ವಾಮಿ, ಮಾಗಡಿಯ ಎಚ್.ಸಿ ಬಾಲಕೃಷ್ಣ, ಹುನಗುಂದದ ವಿಜಯಾನಂದ ಕಾಶಪ್ಪನವರ್, ವಿಜಯನಗರದ ಎಂ.ಕೃಷ್ಣಪ್ಪ, ಚಾಮರಾಜನಗರದ ಪುಟ್ಟರಂಗಶೆಟ್ಟಿ, ಜೇವರ್ಗಿಯ ಅಜಯ್ ಸಿಂಗ್, ಮೈಸೂರು ನರಸಿಂಹರಾಜದ ತನ್ವೀರ್ ಸೇಠ್, ಚಳ್ಳಕೆರೆಯ ಟಿ.ರಘುಮೂರ್ತಿ, ಕೆಜಿಎಫ್ನ ರೂಪಾ ಶಶಿಧರ್, ಹಳಿಯಾಳದ ಆರ್.ವಿ ದೇಶಪಾಂಡೆಗೆ ಮಂತ್ರಿಯಾಗುವ ಆಸೆ ಇದೆ.