ಬೆಂಗಳೂರು

ಶಾಸಕ ವಿನಯ್ ಕುಲಕರ್ಣಿ ಸಿಬಿಐ ಅಧಿಕಾರಿಗಳ ವಶಕ್ಕೆ

ಬೆಂಗಳೂರು:- ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಜಾಮೀನು ಅರ್ಜಿ ವಜಾಮಾಡಿದ ಒಂದು ವಾರದೊಳಿಗೆ ಕೋರ್ಟ್ ಗೆ ಹಾಜರಾಗಬೇಕೆಂದು ವಿನಯ್ ಕುಲಕರ್ಣಿಗೆ ಸೂಚನೆ ನೀಡಿತ್ತು.

ಅದಂತೆ ಇಂದು ವಿನಯ್ ಕುಲಕರ್ಣಿ ಅವರು ಕೋರ್ಟ್ ಗೆ ಹಾಜರಾಗಿದ್ದು, ಬಳಿಕ ಕೋರ್ಟ್ ಸೂಚನೆಯ ಮೇರೆಗೆ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯುತ್ತಿದ್ದಾರೆ.