ಸೌದಿ ಅರೇಬಿಯಾ:- 2018ರಲ್ಲಿ ಬಂಧಿತನಾಗಿದ್ದ ಸೌದಿ ಅರೇಬಿಯಾ ಪತ್ರಕರ್ತರೊಬ್ಬರನ್ನು ಶನಿವಾರ ಗಲ್ಲಿಗೇರಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ, ಟರ್ಕಿಯ ಅಲ್-ಜೇಸರ್ ಎಂಬಾತ ಶಿಕ್ಷೆಗೊಳಗಾದ ವ್ಯಕ್ತಿಯಾಗಿದ್ದು, ಈತನ ಟ್ವೀಟರ್ ಖಾತೆಯಿಂದ ಸೌದಿ ರಾಜ ಮನೆತನದ ವಿರುದ್ಧ ಹಾಗೂ ಬಂಡುಕೋರರ ಗುಂಪುಗಳ ಬಗ್ಗೆ ವಿವಾದಾತ್ಮಕ ಪೋಸ್ಟ್ ಮಾಡಲಾಗಿತ್ತು ಎನ್ನಲಾಗಿದೆ.
2018ರಲ್ಲಿ ಈತನ ಮನೆಯಲ್ಲಿ ಅಧಿಕಾರಿಗಳು ಶೋಧ ನಡೆಸಿ ಬಂಧಿಸಿದ್ದರು, ಇದಾಗಿ 7 ವರ್ಷಗಳ ಬಳಿಕ ಗಲ್ಲುಶಿಕ್ಷೆಯಾಗಿದೆ. ದೇಶದ್ರೋಹ, ಉಗ್ರವಾದಕ್ಕೆ ಬೆಂಬಲಿಸಿದ್ದಕ್ಕಾಗಿ ಶಿಕ್ಷಿಸಿರುವುದಾಗಿ ಸೌದಿ ಹೇಳಿದ್ದು, ಸಾಮಾಜಿಕ ಹೋರಾಟಗಾರರು ಇದನ್ನು ಅಲ್ಲಗಳೆದು ತೀರ್ವವಾಗಿ ವಿರೋಧಿಸಿದ್ದಾರೆ.