ತುಮಕೂರು

ಮೈತ್ರಿಯಿಂದ ಜೆಡಿಎಸ್ ವರ್ಚಸ್ಸು ಕಡಿಮೆಯಾಗ್ತಿದೆ ಎಂದ ಜೆಡಿಎಸ್ ಸಿಎಲ್‌ಪಿ ನಾಯಕ ಸಿ.ಬಿ ಸುರೇಶ್ ಬಾಬು

ತುಮಕೂರು:- ಮೈತ್ರಿಯಿಂದ ಜೆಡಿಎಸ್ ವರ್ಚಸ್ಸು ಕಡಿಮೆಯಾಗ್ತಿದೆ ಎಂಬ ವಿಚಾರ‌ ಕುರಿತು ಜೆಡಿಎಸ್ ಸಿಎಲ್‌ಪಿ ನಾಯಕ ಸಿ ಬಿ ಸುರೇಶ್ ಬಾಬು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಈ ಸಂಬಂಧ ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೊಂದಾಣಿಕೆ ಕೊರತೆಯಾಗಿದೆ ಎಂದು ನಾವು‌ ಸ್ಪಷ್ಟವಾಗಿ ಹೇಳ್ತೇವೆ.

ಯಾವತ್ತು ದೇವೆಗೌಡ್ರು ಬಿಜೆಪಿ ಜೊತೆ ಮುಖ ಮಾಡಿರಲಿಲ್ಲ, ಇದಕ್ಕೆ ಈಗಾಗಲೇ ಮೊನ್ನೆ ಕುಮಾರಣ್ಣ ಬೆಂಗಳೂರಿನಲ್ಲಿ ಉತ್ತರ ಕೊಟ್ಟರು,

ನಮ್ಮ ಪಕ್ಷವನ್ನ ಎಷ್ಟು ಗೌರವಯುತವಾಗಿ ನಡೆಸಿಕೊಳ್ತಿದ್ದಾರೆ. ಇಲ್ಲೂ ಕೂಡ ಅಷ್ಟೇ. ನಾವು ಈಗಾಗಲೇ ಹಲವಾರು ಭಾರಿ‌ ಹೇಳಿದ್ದೇವೆ. ರಾಜ್ಯದಲ್ಲಿ ಒಂದಾಣಿಕೆ‌ ಕೊರತೆ ಆಗಿದೆ ಅಂತಾ ನಾವು ಕೂಡ ಸ್ಪಷ್ಟವಾಗಿ ಹೇಳ್ತೇವೆ. ಯಾಕಂದ್ರೆ ಇಲ್ಲಿ ಸಮನ್ವಯ ಸಮಿತಿಗಳಾಗಲಿಲ್ಲ, ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟಗಳಲ್ಲಿ ಸಮನ್ವಯ ಸಮಿತಿಗಳಾಗಲಿಲ್ಲ. ಅದೆಲ್ಲಾ ಆದ್ರೆ ಜನರಿಗೆ ಗೊಂದಲ ಇರಲ್ಲಾ ಅನ್ನೋ ದೃಷ್ಟಿಯಿಂದ ಇದನ್ನ ನಾವು ಅವಾಗಿನಿಂದ ಬಯಸುತ್ತಿದ್ದೇವೆ. ಖಂಡಿತಾ ಅದು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ನಾಯಕರೆಲ್ಲಾ ಕೂತ್ಕೊಂಡು ಸರಿಪಡಿಸಿ. ಈಗ ಒಂದಾಗಿ ಎರಡು ಪಕ್ಷಗಳು ಒಟ್ಟಾಗಿ ಸಂಘಟನೆ ಮಾಡಲಿಕ್ಕೆ ಅನುಕೂಲ‌ ಮಾಡುತ್ತಿವೆ ಎಂದರು.