ಬೆಂಗಳೂರು

ಅಮಿತ್ ಶಾ ಕೇಂದ್ರದ ಡೈನಾಮಿಕ್ ಲೀಡರ್ ಮಾತ್ರವಲ್ಲ, ನಮ್ಮ ಲೀಡರ್.- ಕುಮಾರಸ್ವಾಮಿ

ಬೆಂಗಳೂರು:- ನೆಲಮಂಗಲದ ಬಳಿಯಿರುವ ನಗರೂರಿನಲ್ಲಿ ಸಿದ್ಧಗೊಂಡಿರುವ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ‌ ಕೇಂದ್ರ ಗೃಹ ಸಚಿವ AMITH SHA ಭಾಗಿಯಾಗಿದ್ದಾರೆ. ನಗರೂರಿನಲ್ಲಿ ಆರಂಭಿಸಿರುವ ಬಿಜಿಎಸ್ ಎಂಸಿಎಚ್ ಆವರಣದಲ್ಲಿ, ಆದಿಚುಂಚನಗಿರಿ ವಿಶ್ವವಿದ್ಯಾಲಯ ಹಾಗೂ ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಅಮಿತ್ ಶಾ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕೂಡ ಭಾಗಿಯಾಗಿದ್ದು, ವೇದಿಕೆಯ ಮೇಲೆ ಮಾತನಾಡುವ ವೇಳೆ ಬಿಜೆಪಿ ಕೇಂದ್ರ ನಾಯಕರಾದ ಅಮಿತ್ ಶಾ, ಕೇಂದ್ರದ ಡೈನಾಮಿಕ್ ಲೀಡರ್ ಮಾತ್ರವಲ್ಲ, ನಮ್ಮ ಲೀಡರ್ ಕೂಡ ಅವರೇ ಹೀಗಾಗಿ ಅವರಿಗೆ ಸ್ವಾಗತ ಕೋರುತ್ತೇನೆ ಎಂದಿದ್ದಾರೆ.

ಹೀಗೆ ವೇದಿಕೆ ಮೇಲೆ ಭಾಷಣಕ್ಕೂ ಮೊದಲು ಅಮಿತ್ ಶಾ ಅವರನ್ನು ಹೆಚ್.ಡಿ ಕುಮಾರಸ್ವಾಮಿ ಹಾಡಿ ಹೊಗಳಿದ್ದಾರೆ. ಆದಿಚುಂಚನಗಿರಿ ಮಠ ಅನೇಕ ಲೀಡರ್ ಗಳಿಗೆ ಅನುಕೂಲ ಮಾಡಿಕೊಟ್ಟಿದೆ. ನನಗೆ ಯಾವಾಗಲೂ ಸಪೋರ್ಟ್ ಮಾಡಲು ಅಮಿತ್ ಶಾ ಇದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರಲ್ಲದೆ, ನಮ್ಮ ಇಲಾಖೆಯಲ್ಲಿ ಏನೇ ಸಮಸ್ಯೆ ಇದ್ದರೂ ಬೆನ್ನಿಗೆ ನಿಂತು ಸಮಸ್ಯೆ ಬಗೆಹರಿಸುತ್ತಾರೆ. ಈ ರೀತಿಯ ಡೈನಾಮಿಕ್ ನಾಯಕ ಮತ್ತೊಬ್ಬರಿಲ್ಲ ಎಂಬ ರೀತಿಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಹಾಡಿ ಹೊಗಳಿದ್ದು ಅಚ್ಚರಿ ಮತ್ತು ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ.