ಬೆಂಗಳೂರು

ಬಣ ರಾಜಕೀಯದಲ್ಲಿ ಸಚಿವರು, ಶಾಸಕರು, ತಟಸ್ಥ ಬಣದವರು ಇವರುಗಳು

ಬೆಂಗಳೂರು:- ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಪ್ರಚಂಡ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಹವಾ ಸೃಷ್ಟಿಯಾಗಿ ಇದೀಗ ಅಧಿಕಾರದ ಮದ ನೆತ್ತಿಗೇರಿ ಬಣ ರಾಜಕೀಯ ಜೋರಾಗಿದೆ.

ನಾನೇ 5 ವರ್ಷ ಸಿಎಂ ಹಾಗೂ ನನಗೆ ಶಾಸಕರ ಬೆಂಬಲ ಇದೆ ಎಂಬ ಅರ್ಥದಲ್ಲಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅದರಲ್ಲೂ ಡಿ.ಕೆ ಶಿವಕುಮಾರ್ ಅವರಿಗೆ ಶಾಸಕರ ಹೆಚ್ಚಿನ ಬೆಂಬಲ ಇಲ್ಲ ಎಂದೂ ಸಿದ್ದರಾಮಯ್ಯ ಹೇಳಿರುವುದು ಡಿ.ಕೆ ಬಣದಲ್ಲಿ ಅಸಮಾಧಾನದ ಹೊಗೆ ಜೋರಾಗಿ ಬರತೊಡಗಿದೆ. ಈ ನಡುವೆ ಕಾಂಗ್ರೆಸ್ ನಲ್ಲಿ ನಂಬರ್ ಗೇಮ್ ಶುರುವಾಗಿದ್ದು, ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಪರವಾಗಿ ಎಷ್ಟು ಶಾಸಕರು, ಸಚಿವರು ಇದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ, ಒಂದಷ್ಟು ಶಾಸಕರು ನೇರವಾಗಿ ಸಿಎಂ, ಡಿಸಿಎಂ ಪರವಾಗಿ ಬ್ಯಾಟ್ ಬೀಸಿದರೆ ಇನ್ನೊಂದಷ್ಟು ಶಾಸಕರು ಅತ್ತ-ಇತ್ತವೂ ಇಲ್ಲದೆ ಅತಂತ್ರ ಸ್ಥಿತಿಗೆ ಬಂದಿದ್ದಾರೆ.

ಇಲ್ಲಿ ಸಿಎಂ ಸಿದ್ದರಾಮಯ್ಯ ಪರವಾಗಿರುವ ಶಾಸಕರ ಸಂಖ್ಯೆ ಗಣನೀಯವಾಗಿ ಬೆಳೆದಿದೆ: ಗಣೇಶ್ ಹುಕ್ಕೇರಿ – ಚಿಕ್ಕೋಡಿ ಮತ ಕ್ಷೇತ್ರ, ಮಹೇಂದ್ರ ತಮ್ಮಣ್ಣವರ – ಕುಡುಚಿ, ಅಸೀಫ್ ಸೇಠ್ – ಬೆಳಗಾವಿ ಸೇರಿದಂತೆ ಉತ್ತರ, ಬಾಬಾ ಸಾಹೇಬ್ ಪಾಟೀಲ – ಕಿತ್ತೂರು, ಮಹಾಂತೇಶ ಕೌಜಲಗಿ – ಬೈಲಹೊಂಗಲ, ವಿಶ್ವಾಸ ವೈದ್ಯ – ಸವದತ್ತಿ ಯಲ್ಲಮ್ಮ, ಅಶೋಕ್ ಪಟ್ಟಣ – ರಾಮದುರ್ಗ, ಜೆ.ಪಿ ಪಾಟೀಲ – ಬೀಳಗಿ, ಭೀಮಸೇನಾ ಚಿಮ್ಮನಕಟ್ಟಿ – ಬಾದಾಮಿ, ಎಚ್ ವೈ ಮೇಟಿ – ಬಾಗಲಕೋಟೆ, ವಿಜಯಾನಂದ ಕಾಶಪ್ಪನವರ್ – ಹುನಗುಂದ, ಸಿ. ಎಸ್ ನಾಡಗೌಡ – ಮುದ್ದೇಬಿಹಾಳ, ವಿಠಲ ಕಟಕಧೋಂಡ – ನಾಗಠಾಣ, ಯಶವಂತರಾಯಗೌಡ ಪಾಟೀಲ – ಇಂಡಿ, ಅಶೋಕ್ ಮನಗೊಳಿ – ಸಿಂದಗಿ, ಎನ್ ಎಚ್ ಕೋನರೆಡ್ಡಿ – ನವಲಗುಂದ, ಪ್ರಸಾದ್ ಅಬ್ಬಯ್ಯ- ಹುಬ್ಬಳ್ಳಿ ಧಾರವಾಡ ಪೂರ್ವ ಜಿ.ಎಸ್ ಪಾಟೀಲ- ರೋಣ, ಯು.ಬಿ ಬಣಕಾರ – ಹಿರೇಕೆರೂರು, ಎಂ.ವೈ ಪಾಟೀಲ – ಅಫಜಲಪುರ, ಡಾ.ಅಜಯ್ ಸಿಂಗ್ – ಜೇವರ್ಗಿ, ಅಲ್ಲಮಪ್ರಭು ಪಾಟೀಲ -ಕಲಬುರಗಿ ದಕ್ಷಿಣ, ಬಿ ಆರ್ ಪಾಟೀಲ್ – ಅಳಂದ, ರಾಜಾ ವೆಂಕಟಪ್ಪ ನಾಯಕ – ಸುರಪುರ, ಚನ್ನಾರೆಡ್ಡಿ, ಪಾಟೀಲ ತನ್ನೂರು – ಯಾದಗಿರಿ, ಹಂಪಯ್ಯ ನಾಯ್ಕ – ಮಾನ್ವಿ, ಬಸನಗೌಡ ತುರ್ವಿ ಹಾಳ – ಮಸ್ಕಿ, ಬಸವರಾಜ ರಾಯರಡ್ಡಿ- ಯಲಬುರ್ಗಾ, ಗಣೇಶ್ – ಕಂಪ್ಲಿ, ರಾಘವೇಂದ್ರ ಹಿಟ್ನಾಳ – ಕೊಪ್ಪಳ, ಬಿ ಎಂ ನಾಗರಾಜ – ಸಿರಗುಪ್ಪ, ನಾಗೇಂದ್ರ – ಬಳ್ಳಾರಿ ಗ್ರಾಮೀಣ, ಭರತ್ ರೆಡ್ಡಿ – ಬಳ್ಳಾರಿ ನಗರ, ಅನ್ನಪೂರ್ಣ ತುಕರಾಂ- ಸಂಡೂರು, ಜಿ ಎಚ್ ಶ್ರೀನಿವಾಸ್ – ತರೀಕೆರೆ, ಕೆ.ಎಸ್ ಆನಂದ್ – ಕಡೂರು, ಯಾಸಿರ್ ಅಹ್ಮದ್ ಖಾನ್ ಪಠಾಣ್ – ಶಿಗ್ಗಾವಿ, ಟಿ ರಘುಮೂರ್ತಿ – ಚೆಳ್ಳಕೆರೆ, ಬಿ ಜಿ ಗೋವಿಂದಪ್ಪ – ಹೊಸದುರ್ಗ, ಶಾಮನೂರು ಶಿವಶಂಕರಪ್ಪ – ದಾವಣಗೆರೆ ದಕ್ಷಿಣ, ಕೆ.ಎಸ್ ಬಸವಂತಪ್ಪ- ಮಾಯಕೊಂಡ, ಎಚ್ ವಿ ಗವಿಯಪ್ಪ – ವಿಜಯನಗರ, ಎನ್ ಟಿ ಶ್ರೀನಿವಾಸ್ – ಕೂಡ್ಲಿಗಿ, ಎಚ್ ವಿ ವೆಂಕಟೇಶ್ – ಪಾವಗಡ, ಟಿ.ಬಿ ಜಯಚಂದ್ರ – ಶಿರಾ, ಕೆ ಎಂ ಶಿವಲಿಂಗಯ್ಯ – ಅರಸೀಕೆರೆ, ಎನ್ ವೈ ನಾರಾಯಣಸ್ವಾಮಿ – ಬಂಗಾರಪೇಟೆ, ರಿಜ್ವಾನ್ ಅರ್ಷದ್ – ಶಿವಾಜಿನಗರ, ಎ.ಆರ್ ಕೃಷ್ಣ ಮೂರ್ತಿ- ಕೊಳ್ಳೆಗಾಲ, ಗಣೇಶ್ ಪ್ರಸಾದ್ – ಗುಂಡ್ಲುಪೇಟೆ, ಪುಟ್ಟರಂಗಸೆಟ್ಟಿ – ಚಾಮರಾಜನಗರ, ಡಿ ರವಿಶಂಕರ್ – ಕೃಷ್ಣ ರಾಜನಗರ, ಅನಿಲ್ ಚಿಕ್ಕಮಾದು- ಎಚ್ ಡಿ ಕೋಟೆ, ಪ್ರಿಯಕೃಷ್ಣಾ – ಗೋವಿಂದರಾಜನಗರ, ಎಂ ಕೃಷ್ಣಪ್ಪ – ವಿಜಯನಗರ, ಪಿ.ಎಂ ನರೇಂದ್ರ ಸ್ವಾಮಿ – ಮಳವಳ್ಳಿ, ಎಸ್ ಪೊಣ್ಣನ್ನ- ವಿರಾಜಪೇಟೆ, ಕೊತ್ತೂರು ಮಂಜುನಾಥ್ – ಕೋಲಾರ, ಅರಸೀಕೆರೆ ‌- ಶಿವಲಿಂಗೇಗೌಡರು ಇವರೆಲ್ಲರೂ ಸಿಎಂ ಸಿದ್ದರಾಮಯ್ಯರವರ ಬಳಗದಲ್ಲಿ ಗುರುತಿಸಿಕೊಂಡಿರುವವರು.

ಡಿ.ಕೆ ಶಿವಕುಮಾರ್ ಪರ ಇರುವ ಶಾಸಕರೆಂದರೆ ಎನ್.ಎ ಹ್ಯಾರಿಸ್-ಶಾಂತಿನಗರ, ಎಸ್ ಸಿ ಶ್ರೀನಿವಾಸ್ – ಪುಲಕೇಶಿ ನಗರ, ಎಚ್ ಸಿ ಬಾಲಕೃಷ್ಣ- ಮಾಗಡಿ, ಸತೀಶ್ ಶೈಲ್ – ಕಾರವಾರ, ದರ್ಶನ್ ಧ್ರುವನಾರಾಯಣ – ನಂಜನಗೂಡು, ಕೆ ಹರೀಶ್ ಗೌಡ – ಚಾಮರಾಜ, ಇಕ್ಬಾಲ್ ಹುಸೇನ್ – ರಾಮನಗರ, ಲಕ್ಷ್ಮಣ ಸವದಿ – ಅಥಣಿ, ಬೇಳೂರು ಗೋಪಾಲಕೃಷ್ಣ- ಸಾಗರ, ಬಿ.ಕೆ ಸಂಗಮೇಶ್ – ಭದ್ರಾವತಿ, ಕದಲೂರು ಉದಯ್ – ಮದ್ದೂರು, ರವಿ ಗಣಿಗ – ಮಂಡ್ಯ, ಮಂಥರ್ ಗೌಡ – ಕೊಡಗು, ರಮೇಶ್ ಬಂಡಿ ಸಿದ್ದೇಗೌಡ – ಶ್ರೀರಂಗಪಟ್ಟಣ
ಎಸ್ ಆರ್ ಶ್ರೀನಿವಾಸ್ – ಗುಬ್ಬಿ, ಪ್ರಕಾಶ್ ಕೋಳಿವಾಡ – ರಾಣಿಬೆನ್ನೂರು, ಬಸವರಾಜ ಶಿವಗಂಗಾ – ಚನ್ನಗಿರಿ, ಡಿ.ಜಿ ಶಾಂತನಗೌಡ – ಜಗಳೂರು, ಶ್ರೀನಿವಾಸ್ ಮಾನೆ – ಹಾಗಾಗಲ್, ಅಶೋಕ್ ರೈ – ಪುತ್ತೂರು, ಎಚ್‌ ಡಿ ರಂಗನಾಥ್ – ಕುಣಿಗಲ್, ಎಸ್.ಎಸ್ ಸುಬ್ಬಾರೆಡ್ಡಿ – ಬಾಗೇಪಲ್ಲಿ, ರಾಜೇಗೌಡ – ಶೃಂಗೇರಿ, ನಯನಾ ಮೋಟಮ್ಮ – ಮೂಡಿಗೆರೆ, ಎಚ್‌ ಡಿ ತಮ್ಮಯ್ಯ – ಚಿಕ್ಕಮಗಳೂರು, ಶರತ್ ಬಚ್ಚೇಗೌಡ – ಹೊಸಕೋಟೆ, ಶ್ರೀನಿವಾಸಯ್ಯ – ನೆಲಮಂಗಲ, ಬಿ ಶಿವಣ್ಣ – ಆನೇಕಲ್, ಹಂಪನಗೌಡ ಬಾದರ್ಲಿ – ಸಿಂಧನೂರು, ಎನ್.ವೈ ಗೋಪಾಲ ಕೃಷ್ಣ – ಮೊಳಕಾಲ್ಮೂರು, ಭೀಮಣ್ಣ ನಾಯ್ಕ್ – ಶಿರಸಿ

ತಟಸ್ಥ ಬಣದಲ್ಲಿದ್ದು ಅತಂತ್ರ ಸ್ಥಿತಿಯಲ್ಲಿ ಇರುವವರೆಂದರೆ ವಿನಯ ಕುಲಕರ್ಣಿ – ಧಾರವಾಡ, ಬಸನಗೌಡ ದದ್ದಲ್ – ರಾಯಚೂರು ಗ್ರಾಮಾಂತರ, ಬಸವರಾಜ ಶಿವಣ್ಣವರ – ಬ್ಯಾಡಗಿ, ಖನೀಝ್ ಫಾತಿಮಾ – ಕಲಬುರಗಿ ಉತ್ತರ, ರಾಜುಕಾಗೆ – ಕಾಗವಾಡ, ಆರ್.ವಿ ದೇಶಪಾಂಡೆ – ಹಳಿಯಾಳ, ಕೆ ಷಡಕ್ಷರಿ – ತಿಪಟೂರು, ಪ್ರದೀಪ್ ಈಶ್ವರ್ – ಚಿಕ್ಕಬಳ್ಳಾಪುರ, ಕೆ.ವೈ ನಂಜೇಗೌಡ – ಮಾಲೂರು, ರೂಪಕಲಾ ಎಂ – ಕೆಜಿಎಫ್, ತನ್ವೀರ್ ಸೇಠ್ – ನರಸಿಂಹರಾಜ, ಕೆ.ಸಿ ವೀರೇಂದ್ರ – ಚಿತ್ರದುರ್ಗ, ಸಿ.ಪಿ ಯೋಗೇಶ್ವರ್-ಚನ್ನರಾಯಪಟ್ಟಣ

ಸಚಿವರಲ್ಲಿ ಸಿಎಂ ಸಿದ್ದರಾಮಯ್ಯ ಪರವಾಗಿ ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ಡಾ ಎಚ್.ಸಿ ಮಹದೇವಪ್ಪ, ಜಮೀರ್ ಅಹ್ಮದ್ ಖಾನ್, ಕೆ.ಜೆ ಜಾರ್ಜ್, ದಿನೇಶ್ ಗುಂಡೂರಾವ್, ಕೆ ಎನ್ ರಾಜಣ್ಣ, ಡಾ.ಜಿ ಪರಮೇಶ್ವರ್, ಎಸ್ ಎಸ್ ಮಲ್ಲಿಕಾರ್ಜುನ, ಡಾ.ಎಂ.ಸಿ ಸುಧಾಕರ್, ಕೆ ವೆಂಕಟೇಶ್, ರಹೀಂ ಖಾನ್, ಶಿವರಾಜ್ ತಂಗಡಗಿ, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಆರ್.ಬಿ ತಿಮ್ಮಾಪುರ, ಸಂತೋಷ್ ಲಾಡ್, ಎಂ.ಬಿ ಪಾಟೀಲ್

ಡಿ.ಕೆ ಶಿವಕುಮಾರ್ ಪರವಾಗಿ ಡಿ.ಸುಧಾಕರ್, ಮಧು ಬಂಗಾರಪ್ಪಮಂಕಾಳ ವೈದ್ಯ, ಲಕ್ಷ್ಮೀ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್ ಮತ್ತು ಚಲುವರಾಯಸ್ವಾಮಿಯವರು.