ಯೆಮೆನ್:- ನಾಳೆ ಯೆಮೆನ್‌ನಲ್ಲಿ ನಡೆಯಬೇಕಿದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಮುಂದೂಡಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಯೆಮೆನ್ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಪ್ರಕರಣ ಕುರಿತು ಪ್ರಸಿದ್ಧ ಸೂಫಿ ವಿದ್ವಾಂಸ ಶೇಖ್ ಹಬೀಬ್ ಉಮರ್ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಯುತ್ತಿದೆ. ಸಭೆಯಲ್ಲಿ ಯೆಮೆನ್ ಸರ್ಕಾರದ ಪ್ರತಿನಿಧಿಗಳು, ನ್ಯಾಯಮೂರ್ತಿಗಳು ಮತ್ತು ಮೃತ ತಲಾಲ್ ಅವರ ಸಹೋದರ ಭಾಗವಹಿಸಿದ್ದಾರೆ.
ಕೇರಳದ ಪಾಲಕ್ಕಾಡ್‌ನ 37 ವರ್ಷದ ನರ್ಸ್ ನಿಮಿಷಾ ಪ್ರಿಯಾ, ತನ್ನ ಪಾರ್ಟ್ನರ್ ಕೊಲೆ ಆರೋಪದ ಮೇಲೆ 2017 ರಿಂದ ಯೆಮೆನ್‌ನಲ್ಲಿ ಜೈಲಿನಲ್ಲಿದ್ದಾರೆ. ಆಕೆಯ ಮರಣದಂಡನೆಯನ್ನು ಎತ್ತಿಹಿಡಿಯಲಾಗಿದ್ದರೂ, ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರವಾಗಿ ನೀಡುವ ದಿಯಾ ಅಥವಾ ಹಣದ ಮೂಲಕ ಕ್ಷಮೆ ಪಡೆಯುವ ಸಾಧ್ಯತೆ ಇದೆ. ಈ ಪ್ರಕರಣದ ಆರಂಭದಿಂದಲೂ ಅವಿಶ್ರಾಂತವಾಗಿ ಕೆಲಸ ಮಾಡುತ್ತಿರುವ ನಿಮಿಷಾ ಪ್ರಿಯಾ ಅಂತಾರಾಷ್ಟ್ರೀಯ ಕ್ರಿಯಾ ಮಂಡಳಿಯ ಕೋರ್ ಕಮಿಟಿ ಸದಸ್ಯ ಸೇರಿದಂತೆ ಗ್ರ್ಯಾಂಡ್ ಮುಫ್ತಿ ಉಸ್ತಾದ್ ಅಬುಬಕ್ಕರ್ ರವರ ಪ್ರಯತ್ನಗಳು ಫಲ ನೀಡುತ್ತವೆ ಮತ್ತು ನಿಮಿಷಾ ಪ್ರಿಯಾ ಬಿಡುಗಡೆಯಾಗುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಕುಟುಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.