ಚಿಕ್ಕಮಗಳೂರು:- ಮಡಬೂರು ರಾಜೇಂದ್ರರವರು ಇತ್ತೀಚಿಗೆ ನಿಧನರಾದ ಹಿನ್ನೆಲೆ ಸರ್ವ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ನುಡಿ ನಮನ ಕಾರ್ಯಕ್ರಮ ನಡೆಸಲು ನಿರ್ಧಾರ ಮಾಡಲಾಯಿತು.
ಡಿಸಿಎಂಸಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸಮಿತಿಯೊಂದನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಎಲ್.ಎಂ.ಸತೀಶ್, ಅಧ್ಯಕ್ಷರಾಗಿ ಜಿ.ಪಂ ಮಾಜಿ ಅಧ್ಯಕ್ಷರಾದ ಪಿ.ಜೆ.ಅಂಟೋನಿ, ಕಾರ್ಯದರ್ಶಿಯಾಗಿ ಶೃಂಗಗಿರಿ ರಮೇಶ್, ಖಜಾಂಚಿಯಾಗಿ ಲೋಕೇಶ್, ಕಾರ್ಯಕ್ರಮ ನಿರ್ದೇಶಕರಾಗಿ ಅಭಿನವ ಗಿರಿರಾಜ್ ಇವರೊಂದಿಗೆ ಎಲ್ಲಾ ಸಂಘ ಸಂಸ್ಥೆಯ ಅಧ್ಯಕ್ಷರುಗಳು ನುಡಿ ನಮನ ಸಮಿತಿಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿರುತ್ತಾರೆ ಎಂದು ಸಭೆ ತೀರ್ಮಾನಿಸಲಾಯಿತು.
ಆಗಸ್ಟ್ 2ನೇ ತಾರೀಖು ಕಾರ್ಯಕ್ರಮ ನಿಗದಿಯಾಗಿದ್ದು, ಕಾರ್ಯಕ್ರಮವು ಲಿಟ್ಲ್ ಫ್ಲವರ್ ಚರ್ಚ್‌ನ ಎಲ್.ಎಫ್.ಹಾಲ್ ನಲ್ಲಿ ಮದ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಸುವುದು. ಅತ್ಯುತ್ತಮ ವಾಗ್ಮಿಯನ್ನು ಮುಖ್ಯ ಭಾಷಣಕಾರರಿಂದ (ರಾಜೇಂದ್ರಣ್ಣರವರ ಒಡನಾಡಿ) ಪ್ರಮುಖ ಬಾಷಣ ಮಾಡಿಸುವುದರ ಜೊತೆಗೆ
ಸಂಘ ಸಂಸ್ಥೆಗಳಿಂದ ಒಬ್ಬರಿಗೆ ಒಂದೆರಡು ನಿಮಿಷ ಮಾತಿನ ಅವಕಾಶ ನೀಡುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಜೇಂದ್ರರವರ ಬಗೆಗಿನ ಕಿರು ಹೊತ್ತಿಗೆ ಬಿಡುಗಡೆ ಮಾಡಲು ತೀರ್ಮಾನಿಸಿ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬರವಣಿಗೆಕಾರ ಪಿ. ಕೆ.ಬಸವರಾಜ್ ನೇತೃತ್ವದಲ್ಲಿ ಪುಸ್ತಕ ಸಮಿತಿ ರಚಿಸಲಾಯಿತು.
ನುಡಿ ನಮನದ ಜೊತೆಗೆ ಗೀತ ಗಾಯನ, ರಾಜೇಂದ್ರರವರ ಜೀವನಾಧಾರಿತ ಹಳೆಯ ಫೋಟೋ, ವಿಡಿಯೋ ಕ್ಲಿಪ್ ಒಳಗೊಂಡ ಬಯೋ ಪಿಕ್ ಚಿತ್ರಣ ಮಾಡಿ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಕಲಾವಿದ ಅಭಿನವ ಗಿರಿರಾಜ್ ರವರಿಗೆ ಜವಾಬ್ದಾರಿ ನೀಡಲಾಯಿತು.
ಎಲ್ಲಾ ಸಂಘ ಸಂಸ್ಥೆಗಳು ಸಕ್ರಿಯವಾಗಿ ಸಹಕಾರ ನೀಡಿ ಒಬ್ಬ ಧೀಮಂತ ವ್ಯಕ್ತಿಯ ವ್ಯಕ್ತಿತ್ವಕ್ಕೆ ಅರ್ಥ ಗರ್ಭಿತ ನುಡಿ ನಮನ ಸಲ್ಲಿಸೋಣ. ಕೈ ಜೋಡಿಸಿ ಬನ್ನಿ ಎಂದು ನುಡಿ ನಮನ ಸಮಿತಿ ಅಧ್ಯಕ್ಷ ಪಿ. ಜೆ.ಆಂಟೋನಿ ಈ ಸಂದರ್ಭದಲ್ಲಿ ಕರೆ ನೀಡಿದರು.
ಕಾಡಾ ನಿಗಮದ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಈ ಕಾರ್ಯಕ್ರಮದಿಂದ ರಾಜೇಂದ್ರರವರು ಒಂದು ಸಮುದಾಯದ, ಒಂದು ಪಕ್ಷಕ್ಕೆ ಸೀಮಿತವಾಗದ ಧೀಮಂತ ವ್ಯಕ್ತಿತ್ವ, ಮುಂದಿನ ಪೀಳಿಗೆಗೆ ತಿಳಿಸಬಹುದೆಂದು ಬಣ್ಣಿಸಿದರು.
ಈ ಮೊದಲ ಸಭೆಗೆ ಊರಿನ ಪ್ರಮುಖರು ಸೇರಿದಂತೆ ಕ್ರಿಶ್ಚಿಯನ್, ಮುಸ್ಲಿಂ ಸಮುದಾಯದ ಮುಖಂಡರು ಅಂತರಾಷ್ಟ್ರೀಯ ಮತ್ತು ಸ್ಥಳೀಯ ಸಂಸ್ಥೆ, ಮಹಿಳಾ ಸಂಘಟನೆಗಳು ಸೇರಿದಂತೆ ಹದಿನೈದಕ್ಕೂ ಹೆಚ್ಚಿನ ಸಂಘ ಸಂಸ್ಥೆಗಳು ಬಾಗವಹಿಸಿದ್ದವು.
Leave feedback about this