ಬೆಂಗಳೂರು

ಭ್ರಷ್ಟ ಐಎಎಸ್‌‍ ಅಧಿಕಾರಿ ವಾಸಂತಿ ಅಮರ್‌ ಲೋಕಾ ದಾಳಿಗೆ

ಬೆಂಗಳೂರು:- ಕೆಲ ದಿನಗಳಿಂದ ಮೈ ಕೊಡವಿ ಎದ್ದು ನಿಂತಿರುವ ಲೋಕಾಯುಕ್ತ ಪೊಲೀಸರು ನಗರದಲ್ಲಿರುವ ಥಂಡಿ ಥಂಡಿ ವಾತಾವರಣದಲ್ಲೂ ಕೆಲ ಭ್ರಷ್ಟ ಅಧಿಕಾರಿಗಳನ್ನು ಬೆವರುವಂತೆ ಮಾಡಿದ್ದಾರೆ. ಅದರಲ್ಲೂ ಐಎಎಸ್‌‍ ಅಧಿಕಾರಿಯೊಬ್ಬರ ಮನೆ ಮೇಲೂ ದಾಳಿ ಮಾಡುವ ಮೂಲಕ ನಾವು ಯಾವ ಭ್ರಷ್ಟ ಅಧಿಕಾರಿಗಳನ್ನೂ ಸುಮ್ಮನೆ ಬೀಡುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಐಎಎಸ್‌‍ ಅಧಿಕಾರಿ ವಾಸಂತಿ ಅಮರ್‌, ಟೌನ್‌ ಪ್ಲಾನಿಂಗ್‌ ಇಲಾಖೆಯ ಸಹಾಯಕ ನಿರ್ದೇಶಕ ಬಾಗ್ಲಿ ಮಾರುತಿ ಹಾಗೂ ಬಿಬಿಎಂಪಿಯ ಕಾರ್ಯ ನಿರ್ವಾಹಕ ಅಭಿಯಂತರ ಎರ್ರಪ್ಪ ರೆಡ್ಡಿ ಅವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.

ಲೋಕಾಯುಕ್ತ ಎಸ್‌‍ಪಿ ವಂಶಿಕೃಷ್ಣ ನೇತೃತ್ವದ ತಂಡ ಮೂವರು ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಮಾತ್ರವಲ್ಲದೆ ಕೆಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಈ ಮೂವರು ಅಧಿಕಾರಿಗಳ ವಿರುದ್ಧ ಈ ಹಿಂದೆ ಹಲವಾರು ಗುರುತರ ಆರೋಪಗಳು ಕೇಳಿ ಬಂದಿದ್ದವು. ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಾಸಂತಿ ಅಮರ್‌ ಅವರ ಮೇಲೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿರುವ ಆರೋಪಗಳು ಕೇಳಿ ಬಂದಿದ್ದವು.

ಅದೇ ರೀತಿ ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬರಿಂದ 10 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್‌ ಎರ್ರಪ್ಪ ರೆಡ್ಡಿ ಮನೆ ಮೇಲೂ ದಾಳಿ ನಡೆಸಿ ಕೋಟ್ಯಂತರ ರೂ.ಗಳ ಅಕ್ರಮ ಆಸ್ತಿ ಪತ್ತೆ ಮಾಡಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಟೌನ್‌ ಪ್ಲಾನಿಂಗ್‌ ಸಹಾಯಕ ನಿರ್ದೇಶಕ ಬಾಗ್ಲಿ ಮಾರುತಿ ಮನೆಯಲ್ಲೂ ಶೋಧ ನಡೆಸಲಾಗಿದ್ದು, ಅವರ ಖಜಾನೆಯಲ್ಲಿದ್ದ ಕೋಟಿ ಕೋಟಿ ರೂ.ಗಳ ಭಂಡಾರವನ್ನು ಲೋಕಾಯುಕ್ತ ಪೊಲೀಸರು ಬಟಾಬಯಲು ಮಾಡಿದ್ದಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video