Uncategorized

ಲವ್ ಸೆಕ್ಸ್ ದೋಖಾ: ವಿವಾಹಿತೆ ಮಹಿಳೆ ಆತ್ಮಹತ್ಯೆ

ವಿಜಯನಗರ:- ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಯುವಕನೋರ್ವ ವಿವಾಹಿತೆ ಮಹಿಳೆಯೊಂದಿಗೆ ಲವ್ ಹೆಸರಿನಲ್ಲಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿ ಮೋಸ ಮಾಡಿದ್ದು, ಇದರಿಂದ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.

ಬಳ್ಳಾರಿ ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಮದ ವಿವಾಹಿತೆ ಮಹಿಳೆಗೆ ಈ ಹಿಂದೆ ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಸುಗೂರು ಶಿವಮೂರ್ತಿ ಎಂಬಾತ ಪರಿಚಯವಾಗಿದ್ದ, ಇಬ್ಬರ ಪರಿಚಯ ಕಾಲಕ್ರಮೇಣ ಸ್ನೇಹಕ್ಕೆ ತಿರುಗಿ ನಂಬರ್ ಕೂಡ ಬದಲಾವಣೆ ಮಾಡಿಕೊಂಡಿದ್ದರು.

ಈ ವೇಳೆ ಆರೋಪಿ ಸುಗೂರು ಶಿವಮೂರ್ತಿಯು ವಿವಾಹಿತಾ ಮಹಿಳೆಗೆ ತನ್ನ ಪ್ರೀತಿಯ ಬಗ್ಗೆ ವ್ಯಕ್ತಪಡಿಸಿದ್ದಾನೆ. ಇದಕ್ಕೆ ಮಹಿಳೆ ಕೂಡ ಒಪ್ಪಿಗೆ ಸೂಚಿಸಿದ್ದಾಳೆ. ಇದಾದ ಬಳಿಕ ಮಹಿಳೆಗೆ ಆದಷ್ಟು ಬೇಗ ಮದುವೆಯಾಗೋಣ ಎಂದು ಹೇಳಿ ಆಕೆಯೊಂದಿಗೆ ಸಾಕಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ.

ಸುಗೂರು ಶಿವಮೂರ್ತಿಯ ನಡೆಯ ಬಗ್ಗೆ ಅನುಮಾನ ಹೆಚ್ಚಾದ ಹಿನ್ನಲೆ ಯಾವಾಗ ಮದುವೆಯಾಗುತ್ತಿಯಾ ಎಂದು ವಿವಾಹಿತ ಮಹಿಳೆ ಕೇಳಿದ್ದಾಳೆ. ಈ ವೇಳೆ ಆಕೆಗೆ ಸಮಾಧಾನ ಮಾಡಿ ಅಲ್ಲಿಂದ ಹೋಗಿದ್ದಾನೆ. ಜೊತೆಗೆ ಇಕೆಯೊಂದಿಗೆ ಪ್ರೀತಿಯಲ್ಲಿ ಇರುವಾಗಲೇ ಸಾಕಷ್ಟು ಹುಡುಗಿಯರ ಜೊತೆ ಸುತ್ತಾಡಿದ್ದ ಎನ್ನಲಾಗಿದೆ.

ಇದೀಗ ಇದರಿಂದ ಮನನೊಂದ ಮಹಿಳೆ ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಮದಲಗಟ್ಟಿ ಗ್ರಾಮದ ತುಂಗಭದ್ರಾ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಿಳೆ ಸೇತುವೆಯಿಂದ ಜಿಗಿಯುತ್ತಿರುವುದನ್ನು ಬೈಕ್ ಸವಾರರು ನೋಡಿದ್ದು, ಕೂಡಲೇ ಮದಲಗಟ್ಟಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಈ ವೇಳೆ ಅಕ್ಕಪಕ್ಕದಲ್ಲಿದ್ದ ಮೀನುಗಾರರು ಮಹಿಳೆಯನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ನದಿ ನೀರಿನ ರಭಸಕ್ಕೆ ಮಹಿಳೆ ಕೊಚ್ಚಿಕೊಂಡು ಹೋಗಿದ್ದಾಳೆ. ಸದ್ಯ ಸ್ಥಳಕ್ಕೆ ಹೂವಿನಹಡಗಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇನ್ನು ಇತ್ತ ಮಹಿಳೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಅದರಂತೆ ಕಾಣೆಯಾದ ಮಹಿಳೆ ಮತ್ತು ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ಪತ್ರ ಬರೆದಿಟ್ಟ ಮಹಿಳೆ ಒಬ್ಬರೇ ಎಂದು ಹೇಳಲಾಗುತ್ತಿದೆ. ನನ್ನ ಸಾವಿಗೆ ಸುಗೂರು ಶಿವಮೂರ್ತಿನೇ ಕಾರಣ, ಈತನಿಗೆ ಮರಣದಂಡನೆ ಶಿಕ್ಷೆ ಆಗಬೇಕು. ನನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ, ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾನೆ. ನನ್ನ ಪ್ರೀತಿ ಮಾಡುತ್ತಾ ಸಾಕಷ್ಟು ಹುಡುಗಿಯರ ಜೊತೆ ಸುತ್ತಾಡಿ ಕೊನೆಗೆ ನನ್ನ ಬಿಟ್ಟಿದ್ದಾನೆ. ದಯವಿಟ್ಟು ಅವನಿಗೆ ಕಠಿಣ ಶಿಕ್ಷೆ ನೀಡಿ.. ಆತನಿಂದ ನನ್ನ ಸಂಸಾರ ಹಾಳಾಯಿತು ಎಂದು ಬರೆದಿದ್ದಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video