ಮಂಗಳೂರು:- ರಾಜ್ ಬಿ ಶೆಟ್ಟಿ ನಿರ್ಮಿಸಿರುವ, ಜೆಪಿ ತುಮಿನಾಡ್ ನಿರ್ದೇಶನದ ‘ಸು ಫ್ರಮ್ ಸೋ’ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸದ್ದಿಲ್ಲದೆ ಬಿಡುಗಡೆಯಾದ ಈ ಚಿತ್ರವು ಕರ್ನಾಟಕದಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ಈ ಚಿತ್ರದ ಯಶಸ್ಸಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಯಶಸ್ಸು ಸಿಕ್ಕಂತಾಗಿದೆ. ದಿನದಿಂದ ದಿನಕ್ಕೆ ಪ್ರದರ್ಶನಗಳು ಹೆಚ್ಚಾಗುತ್ತಿದ್ದು, ಇಂದಿಗೂ ಟಿಕೆಟ್ ಸಿಗದೆ ಜನರು ಪರದಾಡುವಂತಾಗಿದೆ.
ಯುವ ರಾಜ್‌ಕುಮಾರ್ ನಟನೆಯ ಎಕ್ಕ ಮತ್ತು ಕಿರೀಟಿ ರೆಡ್ಡಿ ಅಭಿನಯದ ಜೂನಿಯರ್ ಚಿತ್ರ ಬಿಡುಗಡೆಯೊಂದಿಗೆ ತೆರೆಕಂಡ ಸು ಫ್ರಮ್ ಸೋ ಚಿತ್ರವು ಯಾವುದೇ ಸ್ಟಾರ್ ನಟರಿಲ್ಲದೆಯೇ ಭರ್ಜರಿ ಯಶಸ್ಸು ಕಂಡು ಮುನ್ನುಗ್ಗುತ್ತಿದೆ. ದಕ್ಷಿಣ ಭಾರತದ ಇತರ ಭಾಷೆಗಳಿಂದಲೂ ಚಿತ್ರಕ್ಕೆ ಬೇಡಿಕೆ ಹೆಚ್ಚುತ್ತಿದೆ.
ಚಿತ್ರದ ನಿರ್ಮಾಪಕ ಮತ್ತು ನಟನಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ ಬಿ ಶೆಟ್ಟಿ, ‘ಜನರು ನಮಗೆ ಕಪಾಳಮೋಕ್ಷ ಮಾಡಿ ಎಚ್ಚರಗೊಳಿಸಿದಂತೆ ಭಾಸವಾಯಿತು. ಅವರು, ನಮಗೆ ಒಳ್ಳೆಯ ಸಿನಿಮಾ ಕೊಡಿ, ನಾವು ಚಿತ್ರಮಂದಿರಗಳಿಗೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಅದೇ ನಮಗೆ ಸ್ಪಷ್ಟವಾಗಿ ಬಂದ ಸಂದೇಶ’ ಎಂದರು.
Leave feedback about this