ಮಂಗಳೂರು:- ಧರ್ಮಸ್ಥಳದಲ್ಲಿ ಶವಗಳು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವುಗಳ ಮೇಲೆ ತಿರುವುಗಳು ಸಿಗುತ್ತಿದೆ. ದೂರು ದಾಖಲಿಸಿದ ಅನಾಮಿಕ ವ್ಯಕ್ತಿ 13 ಸ್ಥಳಗಳನ್ನು ಗುರುತಿಸಿದ್ದು, ಅದರಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಶೋಧ ನಡೆಸುತ್ತಿದ್ದು, ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.
ಅನಾಮಿಕ ವ್ಯಕ್ತಿ ಗುರುತಿಸಿದ್ದ 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದು, ಈಗಾಗಲೇ ಆ ಅಸ್ಥಿಪಂಜರವನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅನಾಮಿಕ ವ್ಯಕ್ತಿ ಗುರುತಿಸಿದ್ದ 6ನೇ ಪಾಯಿಂಟ್ ನಲ್ಲಿ ವ್ಯಕ್ತಿಯ ಅಸ್ಥಿಪಂಜರ ಸಿಕ್ಕ ಬೆನ್ನಲ್ಲೇ ಆ ಅಸ್ಥಿಪಂಜರ ಯಾರದ್ದು, ಎಷ್ಟು ವರ್ಷದ ಹಿಂದೆ ಮೃತಪಟ್ಟಿರಬಹುದು ಎಂಬ ಹಲವು ಪ್ರಶ್ನೆಗಳು ಇದೀಗ ಹುಟ್ಟಿಕೊಂಡಿದ್ದು, ಅಸ್ಥಿಪಂಜರ ಸಿಕ್ಕ ಬೆನ್ನಲ್ಲೇ ಒಂದನ್ನೇ ಪಾಯಿಂಟ್ ನಲ್ಲಿ ಸಿಕ್ಕ ಡೆಬಿಟ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಮಹಾ ರಹಸ್ಯ ಬಯಲಾಗಿದೆ.
ನೇತ್ರಾವತಿ ಸ್ನಾನ ಘಟ್ಟದ ಬಳಿಯಲ್ಲಿ ಪಾಯಿಂಟ್.1ರಲ್ಲಿ ಅಸ್ಥಿ ಪಂಜರಕ್ಕಾಗಿ ಶೋಧ ಕಾರ್ಯಾಚರಣೆಯ ವೇಳೆಯಲ್ಲಿ ಡೆಬಿಟ್ ಕಾರ್ಡ್, ಪಾನ್ ಕಾರ್ಡ್ ದೊರೆತಿತ್ತು. ಆ ಬಗ್ಗೆ ತನಿಖೆ ನಡೆಸಿರುವಂತ ಎಸ್‌ಐಟಿ ತಂಡವು, ಅವುಗಳ ರಹಸ್ಯವನ್ನು ಬಯಲು ಮಾಡಿದ್ದಾರೆ.
ಅನಾಮಿಕ ವ್ಯಕ್ತಿ ಗುರುತಿಸಿದ ಮೊದಲ ಸ್ಥಳದಲ್ಲಿ, ಪ್ಯಾನ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪತ್ತೆಯಾಗಿತ್ತು. ಪಾನ್ ಕಾರ್ಡ್ ವಶಪಡಿಸಿಕೊಂಡ ಎಸ್‌ಐಟಿ ತಂಡವು ಅದು ಯಾರದ್ದು ಎಂದು ಕಂಡುಹಿಡಿದಿದೆ. ಈ ಪ್ಯಾನ್ ಕಾರ್ಡ್ ಹೊಂದಿದ್ದ ವ್ಯಕ್ತಿ 2025ರ ಮಾರ್ಚ್ ತಿಂಗಳಲ್ಲಿ ಕಾಮಾಲೆಯಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇಲಾಖೆ ಸಿಬ್ಬಂದಿ ಮೃತರ ತಂದೆಯನ್ನು ಸಂಪರ್ಕಿಸಿದ್ದು, ಈ ಸಮಯದಲ್ಲಿ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಸ್‌ಐಟಿ ಅಧಿಕಾರಿಗಳು ಪಾಯಿಂಟ್ ನಂ.1ರಲ್ಲಿ ಸಿಕ್ಕಿದ್ದಂತ ಡೆಬಿಟ್ ಕಾರ್ಡ್ ತನಿಖೆ ನಡೆಸಿದ್ದು, ಈ ತನಿಖೆಯಲ್ಲಿ ಡೆಬಿಟ್ ಕಾರ್ಡ್ ವಾರಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಇನ್ನೂ ಪಾಯಿಂಟ್ ನಂಬರ್ ಒನ್‌ನಲ್ಲಿ ಕಂಡುಬಂದ ಡೆಬಿಟ್ ಮತ್ತು ಪ್ಯಾನ್ ಕಾರ್ಡ್‌ಗಳು ಎರಡೂ ಒಂದೇ ಕುಟುಂಬಕ್ಕೆ ಸೇರಿದವರದ್ದಾಗಿದೆ ಎಂದು ತಿಳಿದು ಬಂದಿದೆ.
ಇನ್ನು 6ನೇ ಪಾಯಿಂಟ್ ನಲ್ಲಿ 12 ಮೂಳೆಗಳು ಪತ್ತೆಯಾಗಿವೆ, ಕೈ, ಕಾಲಿನ 2 ಮೂಳೆ ಸೇರಿದಂತೆ ಇತರೆ ಸಣ್ಣ ಮೂಳೆಗಳು ಪತ್ತೆಯಾಗಿವೆ, ಬುರಡೆಯ ಎರಡು ತುಂಡುಗಳು ಪತ್ತೆಯಾಗಿವೆ. ಮೂಳೆ, ಬುರುಡೆಯ ತುಂಡು ಸಂರಕ್ಷಿಸಿ ಎಫ್ ಎಸ್ ಎಲ್ ತಂಡ ತೆಗೆದುಕೊಂಡು ಹೋಗಿದೆ. ಯಾವುದೇ ಸಾಕ್ಷ್ಯ ನಾಶವಾಗದಂತೆ ಎಸ್ ಐಟಿಯಿಂದ ಕಟ್ಟೆಚ್ಚರ ವಹಿಸಲಾಗಿದೆ, ಗುಂಡಿಯೊಳಗೆ ನೀರು ತುಂಬಿದರೆ ಸಾಕ್ಷ್ಯ ನಾಶವಾಗುವ ಆತಂಕದ ಹಿನ್ನೆಲೆಯಲ್ಲಿ 6ನೇ ಪಾಯಿಂಟ್ ಮೇಲ್ಭಾಗದಲ್ಲಿ ಶೀಟ್ ಅಳವಡಿಸಿ ಸಂರಕ್ಷಣೆ ಮಾಡಲಾಗುತ್ತಿದೆ.
Leave feedback about this