ದಕ್ಷಿಣ ಕನ್ನಡ

ಅಪರಿಚಿತ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಅಪರಿಚಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಈಗಾಗಲೇ ಒಬ್ಬ ದೂರುದಾರನ ಹೇಳಿಕೆ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಕೆಲ ಪಾಯಿಂಟ್‌ನಲ್ಲಿ ಮನುಷ್ಯನ ದೇಹದ ಅಸ್ತಿಪಂಜರದ ಕೆಲವು ಮೂಳೆಗಳು ದೊರೆತಿವೆ.

ಎಸ್‌ಐಟಿ ಕಚೇರಿಗೆ ಮತೊಬ್ಬ ದೂರುದಾರ ಆಗಮಿಸಿ 15 ವರ್ಷದ ಬಾಲಕಿಯ ಶವ ಹೂತಿದ್ದನ್ನು ನಾನು ನೋಡಿದ್ದೇನೆ, ಅದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ ಎಂದು ಹೇಳಿಕೆ ನೀಡಿದ್ದು ಕೇಸ್ ಗೆ ಮತ್ತೊಂದು ತಿರುವು ನೀಡಿದೆ.

YES.. ಈಗ ಈ ಒಂದು ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಎಸ್‌ಐಟಿ ಮುಂದೆ ಮತ್ತೊಬ್ಬ ದೂರುದಾರ ಪ್ರತ್ಯಕ್ಷನಾಗಿದ್ದಾನೆ. ಪ್ರಕರಣ ದಾಖಲು ಮಾಡದೆ ಶವ ಹೂತು ಹಾಕಲಾಗಿದೆ. ಶವ ಹೂತು ಹಾಕಿದ ಜಾಗ ಗೊತ್ತಿದೆ. ನಾನೇ ಅದಕ್ಕೆ ಪ್ರತ್ಯಕ್ಷದರ್ಶಿ ಈಗಲೂ ಎಸ್‌ಐಟಿ ಅಧಿಕಾರಿಗಳಿಗೆ ಆ ಜಾಗವನ್ನು ತೋರಿಸುತ್ತೇನೆ ಎಂದು ಮತ್ತೊಬ್ಬ ದೂರುದಾರ ಜಯಂತ್ ಹೇಳಿಕೆ ನೀಡಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆಯ ಇಚೀಲಂಪಾಡಿ ನಿವಾಸಿ ಜಯನ್ ಎಂಬ ಸಾಕ್ಷಿದಾರ ಹದಿನೈದು ವರ್ಷಗಳ ಹಿಂದೆ ಬಾಲಕಿ ಒಬ್ಬಳ ಮೃತ ದೇಹ ನೋಡಿದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಬಾಲಕಿಯ ನೋಡಿದ್ದೆ 15 ವರ್ಷದ ಬಾಲಕಿಯ ಶವವನ್ನು ಹಾಕಲಾಗಿದೆ ಪ್ರಕರಣ ದಾಖಲು ಮಾಡದೆ ಶವವನ್ನು ಹೂಳಲಾಗಿದೆ. ಶವ ಹಾಕಿದ ಜಾಗ ನನಗೆ ಗೊತ್ತಿದೆ ಎಂದು ಎಸ್‌ಐಟಿ ಅಧಿಕಾರಿಗಳ ಕಚೇರಿಗೆ ಬಂದು ಹೇಳಿಕೆ ನೀಡಿದ್ದು, ಅಧಿಕಾರಿಗಳು ಆತನಿಗೆ ಸೋಮವಾರ ಬರುವಂತೆ ತಿಳಿಸಿದ್ದಾರೆ. ಇಂದು ಭಾನುವಾರ ಆಗಿರುವುದರಿಂದ ಯಾವುದೇ ಉತ್ಪನ್ನನ ಕಾರ್ಯ ಇರುವುದಿಲ್ಲ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video