ಮಂಗಳೂರು:- ಕೆಲ ದಿನಗಳ ಹಿಂದೆ ಹೈಕೋರ್ಟ್ ಕೇವಲ ಕುಡ್ಲ ರ್ಯಾಂಪೇಜ್ ಎಂಬುವರು ಸಲ್ಲಿಸಿದ್ದಂತ ಧರ್ಮಸ್ಥಳ ಕೇಸ್ ಸಂಬಂಧಿಸಿದಂತ ಪ್ರಕರಣದ ತಡೆಯಾಜ್ಞೆಯನ್ನು ರದ್ದುಗೊಳಿಸಿತ್ತು. ಇತ್ತ ಬೆಂಗಳೂರಿನ ಸಿಸಿಹೆಚ್ 16ನೇ ನ್ಯಾಯಾಲಯವು 338 ಜನರ ವಿರುದ್ಧ ವಿಧಿಸಿದ್ದಂತ ತಡೆಯಾಜ್ಞೆಯನ್ನು ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.
ಈ ಕುರಿತಂತೆ ಹಿರಿಯ ಪತ್ರಕರ್ತ ನವೀನ್ ಸೂರಂಜಿ ಅವರು ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಧರ್ಮಸ್ಥಳ ಹೋರಾಟದಲ್ಲಿ ಬಿಗ್ ವಿಕ್ಟರಿ: ಹೈಕೋರ್ಟ್ ಕೇವಲ ಕುಡ್ಲ ರ್ಯಾಂಪೇಜ್ ತಡೆಯಾಜ್ಞೆಯನ್ನು ಮಾತ್ರ ರದ್ದುಗೊಳಿಸಿತ್ತು. ನಾನು, ಮುನೀರ್ ಕಾಟಿಪಳ್ಳ, ಬೈರಪ್ಪ ಹರೀಶ್ ಕುಮಾರ್ ಅವರು ತಡೆಯಾಜ್ಞೆ ತೆರವುಗೊಳಿಸುವಂತೆ ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದೆವು. ಈ ಮಧ್ಯೆ ಧರ್ಮಸ್ಥಳದ ಜೊತೆ ಪೂರ್ವಸಂಬಂಧ ಹೊಂದಿದ್ದ ನ್ಯಾಯಾಧೀಶರನ್ನು ಪ್ರಕರಣದಿಂದ ಹಿಂದೆ ಸರಿಯುವಂತೆ ಅರ್ಜಿ ಹಾಕಿ ಯಶಸ್ವಿಯಾಗಿದ್ದೆವು ಎಂದಿದ್ದಾರೆ.
ಇಂದು ಪ್ರಕರಣ ಸಿಸಿಎಚ್ 16 ಮಾನ್ಯ ನ್ಯಾಯಾಧೀಶರಾದ ಅನೀತಾ ಎಂ ಅವರ ಮುಂದೆ ವಿಚಾರಣೆಗೆ ಬಂತು. 338 ಜನರ ವಿರುದ್ದ ಹೊರಡಿಸಲಾದ ತಡೆಯಾಜ್ಞೆಯನ್ನು ಮುಂದುವರೆಸಲು ಮಾನ್ಯ ನ್ಯಾಯಾಧೀಶರು ನಿರಾಕರಿಸಿದ್ದಾರೆ. ಈಗ 338 ಜನರ ತಡೆಯಾಜ್ಞೆಯೂ ರದ್ದಾಗಿದೆ. ಹಿರಿಯ ವಕೀಲರಾದ ಎಸ್ ಬಾಲನ್ ಸೇರಿದಂತೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂಬುದಾಗಿ ನವೀನ್ ಸೂರಿಂಜೆ ತಿಳಿಸಿದ್ದಾರೆ.
Leave feedback about this