ಬೆಂಗಳೂರು

ಭದ್ರತಾ ಕಾರಣಗಳಿಂದ ಚುನಾವಣಾ ಆಯೋಗಕ್ಕೆ ತೆರಳದಂತೆ ರಾಹುಲ್ ಗಾಂಧಿಗೆ ಮನವಿ

ಬೆಂಗಳೂರು:- ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, 2024ರ ಚುನಾವಣೆಯ ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವನ್ನು ಭೇಟಿಯಾಗಲು ಇಂದು ತೆರಳದಿರಲು ನಿರ್ಧರಿಸಿದ್ದರು, ಬೆಂಗಳೂರು ಪೊಲೀಸ್ ಕಮಿಷನರ್ ಭದ್ರತಾ ಕಾರಣಗಳಿಂದ ಆಯೋಗಕ್ಕೆ ತೆರಳದಂತೆ ಮನವಿ ಮಾಡಿದ್ದು, ಈ ಭೇಟಿಗೆ ಅನುಮತಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

ಚುನಾವಣಾ ಅಧಿಕಾರಿ ತಮ್ಮ ಪತ್ರದಲ್ಲಿ ಮತದಾರರ ಪಟ್ಟಿಯ ತಯಾರಿಕೆಯು ಕಾಲಕಾಲಕ್ಕೆ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದ್ದರು. 2024ರ ನವೆಂಬರ್‌ನಲ್ಲಿ ಕರಡು ಮತದಾರರ ಪಟ್ಟಿಯನ್ನು ಮತ್ತು 2025ರ ಜನವರಿಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಕಾಂಗ್ರೆಸ್ ನಾಯಕರಿಗೆ ಒದಗಿಸಲಾಗಿದೆ. ಆದರೆ, ಈ ಪಟ್ಟಿಗಳ ಬಗ್ಗೆ ಕಾಂಗ್ರೆಸ್‌ನಿಂದ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗಿಲ್ಲ. ಎರಡನೇ ಹಂತದಲ್ಲಿ ಚುನಾವಣಾಧಿಕಾರಿಗಳ ಮುಂದೆಯೂ ಯಾವುದೇ ಆಕ್ಷೇಪಣೆಗಳನ್ನು ಎತ್ತಿಲ್ಲ. ಚುನಾವಣೆಯ ನಡವಳಿಕೆಯ ಬಗ್ಗೆ ಆಕ್ಷೇಪಣೆಗಳಿದ್ದರೆ, ಅವುಗಳನ್ನು ಎಲೆಕ್ಷನ್ ಪಿಟಿಷನ್ ಮೂಲಕ ಹೈಕೋರ್ಟ್‌ನಲ್ಲಿ ಸಲ್ಲಿಸಬೇಕಿತ್ತು. ಆದರೆ, ರಾಹುಲ್ ಗಾಂಧಿಯವರು ಕಾನೂನಾತ್ಮಕ ಕ್ರಮಕ್ಕಿಂತ ಸುದ್ದಿಗೋಷ್ಠಿಯ ಮೂಲಕ ಆರೋಪ ಮಾಡಿರುವುದು ಸರಿಯಲ್ಲ ಎಂದಿದ್ದ ಚುನಾವಣಾ ಆಯೋಗ. ಅದರಂತೆ ಕಾಂಗ್ರೆಸ್ ನಿಯೋಗವು ಆಗಸ್ಟ್ 8ರಂದು ಚುನಾವಣಾಧಿಕಾರಿಗಳನ್ನು ಭೇಟಿಯಾಗಲು ಸಮಯ ಖಚಿತಪಡಿಸಿರುವುದಾಗಿ ವರದಿಗಳು ಬಂದಿದ್ದವು. ಇಂದು ಚುನಾವಣೆ ಆಯೋಗವನ್ನು ರಾಹುಲ್ ಗಾಂಧಿ ಭೇಟಿಯಾಗಬೇಕಿತ್ತು. ಆದರೆ ಭದ್ರತೆ ಕಾರಣ ಹೇಳಿ ಹೋಗದಿರಲು ನಿರ್ಧಿಸಲಾಗಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video