ಬೆಂಗಳೂರು

ಬೆಂಗಳೂರು-ಬೆಳಗಾವಿ ನಡುವೆ ಸಂಚರಿಸಲಿರುವ ರೈಲಿಗೆ ಇಂದು ಪ್ರಧಾನಿ ಮೋದಿಯವರಿಂದ ಚಾಲನೆ

ಬೆಂಗಳೂರ:- ಬೆಂಗಳೂರು ಮತ್ತು ಬೆಳಗಾವಿ ನಡುವೆ ಸಂಚರಿಸಲಿರುವ ಈ ಹೊಸ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಇದರೊಂದಿಗೆ ರಾಜ್ಯದಲ್ಲಿ ಸಂಚರಿಸುವ ವಂದೇ ಭಾರತ್ ರೈಲುಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಈ ಮೂಲಕ ಕರ್ನಾಟಕದ ಜನರಿಗೆ ಮತ್ತೊಂದು ಬಹುನಿರೀಕ್ಷಿತ ವಂದೇ ಭಾರತ್ ರೈಲು ಸೇವೆ ಇಂದು ಆರಂಭವಾಗಿದೆ.

ಕಳೆದ 3 ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ವಂದೇ ಭಾರತ್ ರೈಲುಗಳ ಸೇವೆ ವಿಸ್ತರಿಸಲಾಗುತ್ತಿದ್ದು, 2022ರ ನವೆಂಬರ್‌ನಲ್ಲಿ ಮೈಸೂರು-ಚೆನ್ನೈ ಮಾರ್ಗದಲ್ಲಿ ಕರ್ನಾಟಕದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಾಗಿತ್ತು. ಈಗ, ಈ 11 ರೈಲುಗಳ ಪೈಕಿ 2 ರೈಲುಗಳು ರಾಜ್ಯದೊಳಗೇ ಸಂಚರಿಸಿದರೆ, ಉಳಿದ 9 ರೈಲುಗಳು ಕರ್ನಾಟಕ ಮತ್ತು ನೆರೆ ರಾಜ್ಯಗಳ ನಡುವೆ ಸಂಚಾರ ನಡೆಸುತ್ತಿವೆ. ಯಾವ ವಂದೇ ಭಾರತ್ ರೈಲುಗಳು ಎಲ್ಲಿಗೆ ಸಂಪರ್ಕ ಕಲ್ಪಿಸಲಿವೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕದಲ್ಲಿ ಸಂಚರಿಸುತ್ತಿರುವ ವಂದೇ ಭಾರತ್ ರೈಲುಗಳ ಪಟ್ಟಿ:

ಎಂಜಿಆರ್ ಚೆನ್ನೈ ಸೆಂಟ್ರಲ್ – ಮೈಸೂರು (ನಿಲುಗಡೆ- ಕಟ್ಪಾಡಿ, ಬೆಂಗಳೂರು)

ಮೈಸೂರು – ಎಂಜಿಆರ್ ಚೆನ್ನೈ ಸೆಂಟ್ರಲ್ (ನಿಲುಗಡೆ- ಮಂಡ್ಯ, ಬೆಂಗಳೂರು, ಕೆಆರ್‌ ಪುರಂ, ಕಟ್ಪಾಡಿ)

ಕಲಬುರಗಿ – ಎಸ್‌ಎಂವಿಟಿ ಬೆಂಗಳೂರು (ನಿಲುಗಡೆ- ಯಾದಗಿರಿ, ಮಂತ್ರಾಲಯ, ರಾಯಚೂರು,ಗುಂತಕಲ್‌, ಅನಂತಪುರ, ಯಲಹಂಕ )

ಕೆಎಸ್‌ಆರ್ ಬೆಂಗಳೂರು – ಧಾರವಾಡ (ನಿಲುಗಡೆ- ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ)

ಮಂಗಳೂರು ಸೆಂಟ್ರಲ್ – ತಿರುವನಂತಪುರ (ನಿಲುಗಡೆ- ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ತಿರೂರು, ಶೋರನೂರು, ತಿಶೂರ್, ಎರ್ನಾಕುಲಂ, ಆಲಪೇಯ್, ಕೊಲ್ಲಂ)

ಬೆಂಗಳೂರು ಕಂಟೋನ್ಮೆಂಟ್ – ಕೊಯಮತ್ತೂರು (ನಿಲುಗಡೆ- ಧರ್ಮಾಪುರಿ, ಸೇಲಂ, ಇರೋಡ್‌, ತಿರುಪ್ಪೂರ್)

ಮಂಗಳೂರು ಸೆಂಟ್ರಲ್ – ಮಡಗಾಂವ್ (ನಿಲುಗಡೆ- ಉಡುಪಿ, ಕಾರವಾರ)

ಬೆಂಗಳೂರು ಯಶವಂತಪುರ – ಕಾಚೇಗುಡ ಹೈದರಾಬಾದ್ (ನಿಲುಗಡೆ- ಧರ್ಮಾವರಂ, ಅನಂತಪುರ, ಕರ್ನೂಲ್‌, ಮೆಹಬೂಬ್‌ನಗರ)

ಬೆಂಗಳೂರು ಕಂಟೋನ್ಮೆಂಟ್ – ಮಧುರೈ (ನಿಲುಗಡೆ- ದಿಂಡಗಲ್‌, ತಿರುಚಿ, ಕರೂರು, ನಾಮಕಲ್, ಸೇಲಂ, ಕೆಆರ್‌ ಪುರಂ)

ಹುಬ್ಬಳ್ಳಿ – ಪುಣೆ (ನಿಲುಗಡೆ- ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ)

ಬೆಂಗಳೂರು – ಬೆಳಗಾವಿ ಇಂದು ಮೋದಿ ಚಾಲನೆ (ನಿಲುಗಡೆ- ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ)

ಹೊಸದಾಗಿ ಆರಂಭವಾದ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ವಿವರ:

ರೈಲು ಸಂಖ್ಯೆ: 26751/26752

ನಿಲ್ದಾಣಗಳು: ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ.

ಸಂಚಾರ ದೂರ: 606 ಕಿ.ಮೀ.

ಆರಂಭದ ದಿನಾಂಕ: 2025ರ ಆಗಸ್ಟ್ 10 ಅಂದರೆ ಇಂದಿನಿಂದ ಆರಂಭ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video