ಬೆಂಗಳೂರು:- ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದ ಹುದ್ದೆಯಿಂದ ವಜಾಗೊಳಿಸಿ ರಾಜ್ಯಪಾಲರ ಆದೇಶ ಮಾಡಿದ್ದಾರೆ. ಪಕ್ಷದಿಂದಲೂ ಉಚ್ಚಾಟನೆ ಮಾಡುವ ಹಂತಕ್ಕೆ ಹೈಕಮಾಂಡ್ ಗರಂ ಆಗಿದೆ ಎನ್ನಲಾಗುತ್ತಿದ್ದು ಪಕ್ಷದಿಂದ ಉಚ್ಚಾಟನೆಯ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.
ಎಲ್ಲವನ್ನೂ ಫೇಸ್ ಮಾಡಲು ತಾನು ಸಿದ್ದ ಎಂದು ರಾಜಣ್ಣ ಹೇಳಿದ್ದಾರಂತೆ. ಪಕ್ಷದಿಂದ ಉಚ್ಚಾಟಿಸಿದರೆ ಮುಂದೇನು ಎಂಬ ಬಗ್ಗೆಯೂ ರಾಜಣ್ಣ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಪರಮೇಶ್ವರ್ ಹಾಗೂ ಉಳಿದ ನಾಯಕರ ಜೊತೆಗೆ ರಾಜಣ್ಣ ಚರ್ಚೆ ನಡೆಸಿದ್ದಾರೆ.
ತಾವೇ ಅಧಿಕಾರ ಬಳಸಿ ಸಚಿವ ಸಂಪುಟದಿಂದ ತೆಗೆದುಹಾಕಿದ್ರಾ ಸಿಎಂ., ಸಿಎಂ ಪರಮಾಧಿಕಾರ ಬಳಸಿ ರಾಜಣ್ಣ ಕೈಬಿಟ್ಟರಾ ಸಿಎಂ ಎಂಬುದು ರಾಜಭವನದ ಪತ್ರದಲ್ಲಿ ಆ ಮಾಹಿತಿ ಇದೆ. ಮಾಧ್ಯಮದ ಮುಂದೆ ನಾನೇಕೆ ರಾಜೀನಾಮೆ ನೀಡಲಿ ಎಂದಿದ್ದ ರಾಜಣ್ಣರವರು ರಾಜ್ಯಪಾಲರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ರಾಜಭವನದಿಂದಲೂ ತೆಗೆದುಹಾಕಲಾಗಿದೆ ಅಂತಲೇ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಸಚಿವ ಸ್ಥಾನದಿಂದ ವಜಾಗೊಳಿಸಿದ್ದಕ್ಕೆ ನನ್ನದೇನು ಆಕ್ಷೇಪಣೆ ಇಲ್ಲ, ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. ಸಂಪುಟದಿಂದ ತೆಗೆದು ಹಾಕಿರುವ ಕುರಿತು ಮುಂದಿನ ತೀರ್ಮಾನ ಕುರಿತು ಬೆಂಬಲಿಗರ ಜತೆ ಚೆರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ರಾಜಣ್ಣ ಹೇಳಿದ್ದಾರೆ.
ಸಿಎಂ ಭೇಟಿಯಾದ ರಾಜಣ್ಣ: ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ರಾಜಣ್ಣ ಭೇಟಿ ಮಾಡಿದ್ದಾರೆ. ಸಚಿವ ಚೆಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿ, ರಾಜೇಂದ್ರ ಕೂಡ ರಾಜಣ್ಣಗೆ ಸಾಥ್ ನೀಡಿದ್ದಾರೆ.
Leave feedback about this