Uncategorized

ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲು

ದೆಹಲಿ:- ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣವೇ ಜೈಶಂಕರ್ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 70 ವರ್ಷದ ಜೈಶಂಕರ್ ಅಪಾರ ಅನುಭವ ಹೊಂದಿರುವ ಇವರು ತಮ್ಮ ಖಡಕ್ ಮಾತುಗಳಿಂದಲೂ ಜನಪ್ರಿಯರಾಗಿದ್ದಾರೆ.

ಇಂದು ಬೆಳಗ್ಗೆ ಕೇಂದ್ರ ಏಷ್ಯಾದ ಚಾಡ್ ದೇಶದ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿ ಟ್ವೀಟ್ ಮಾಡಿದ್ದ ಜೈಶಂಕರ್, ವಿದೇಶಾಂಗ ಇಲಾಖೆಯ ಹಲವು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿಯ 2ನೇ ಅಧಿಕಾರದ ಅವಧಿಯಲ್ಲಿ ಎಸ್ ಜೈಶಂಕರ್ ವಿದೇಶಾಂಗ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡರು. ಬಳಿಕ ಮೂರನೇ ಅವಧಿ ಸರ್ಕಾರದಲ್ಲೂ ಜೈಶಂಕರ್ ವಿದೇಶಾಂಗ ಸಚಿವರಾಗಿ ಮುಂದುವರಿದಿದ್ದಾರೆ. ಸುದೀರ್ಘ ದಿನಗಳ ಕಾಲ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ ಭಾರತದ 2ನೇ ವಿದೇಶಾಂಗ ಸಚಿವ ಅನ್ನೋ ಹೆಗ್ಗಳಿಕೆಗೂ ಜೈಶಂಕರ್ ಪಾತ್ರರಾಗಿದ್ದರೆ. ಮೊದಲ ಸ್ಥಾನವನ್ನು ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅಲಂಕರಿಸಿದ್ದಾರೆ.

38 ವರ್ಷಗಳ ಕಾಲ ವಿದೇಶಾಂಗ ಇಲಾಖೆಯಲ್ಲಿ ಸೇವೆ: ಎಸ್ ಜೈಶಂಕರ್ ಬರೋಬ್ಬರಿ 38 ವರ್ಷಗಳ ಕಾಲ ವಿದೇಶಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸಿಂಗೂಪಾರು, ಜೆಕ್ ರಿಪಬ್ಲಿಕ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 2015ರಿಂದ 2018ರ ಅವಧಿಯಲ್ಲಿ ವಿದೇಶಾಂಗ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2019ರಲ್ಲಿ ವಿದೇಶಾಂಗ ಸಚಿವರಾಗಿ ಮೋದಿ ಆಯ್ಕೆ ಮಾಡಿದ್ದರು. ಬಳಿಕ ರಾಜ್ಯಸಭೆ ಸದಸ್ಯರಾಗುವ ಮೂಲಕ ರಾಜಕಾರಣಿಯಾಗಿಯೂ ಮಿಂಚುತ್ತಿದ್ದಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video