ಚಿಕ್ಕಮಗಳೂರು

ಶೃಂಗೇರಿಯ ತೊರೆಹಡ್ಲು: ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಸಚಿವರನ್ನು ಭೇಟಿ ಮಾಡಿದ ಡಾ.ಆರತಿಕೃಷ್ಣ

ಚಿಕ್ಕಮಗಳೂರು:- ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯವನ್ನು ಮಂಜೂರು ಮಾಡಲು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದ ಡಾ.ಆರತಿಕೃಷ್ಣರವರು ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿಯವರನ್ನು ಭೇಟಿ ಮಾಡಿ ಶೃಂಗೇರಿಯ ತೊರೆ ಹಡ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಬಾಲಕಿಯರ ವಿದ್ಯಾರ್ಥಿ ನಿಲಯ ಮಂಜೂರು ಮಾಡಲು ಮನವಿಯನ್ನು ಸಲ್ಲಿಸಿದರು.

ಶೃಂಗೇರಿ ತಾಲ್ಲೂಕಿನ ತೊರೆಹಡ್ಲು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಒಂದು ಉತ್ತಮ ಶಾಲೆಯಾಗಿದ್ದು, ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವು ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿರುತ್ತಾರೆ. ಅದರಲ್ಲಿ ನಮ್ಮ ತಂದೆಯವರಾದ ದಿವಂಗತ ಬೇಗಾನ ರಾಮಯ್ಯನವರು ಕೂಡ ಒಬ್ಬರು, ಇವರು ಸಚಿವರಾಗಿದ್ದ ಸಂದರ್ಭದಲ್ಲಿ ಈ ಶಾಲೆಗೆ ಅನುಕೂಲವಾಗುವ ನಿಟ್ಟಿನಲ್ಲಿ 05 ಎಕರೆ ಜಾಗವನ್ನು ಮಂಜೂರು ಮಾಡಿಸಿ, ಶಾಲೆಗೆ ಬೇಕಾದ ಅವಶ್ಯಕತೆಗಳನ್ನು ಸರ್ಕಾರದ ವತಿಯಿಂದ ಒದಗಿಸಿಕೊಟ್ಟಿದ್ದರು. ಪ್ರಸ್ತುತ ಈ ಶಾಲೆಗೆ ದೂರದ ಹರಿಹರಪುರ, ನಿಲುವಾಗಿಲು, ಶೃಂಗೇರಿ, ಕಿಗ್ಗಾ ಭಾಗಗಳಿಂದಲೂ ವಿದ್ಯಾರ್ಥಿಗಳು ಬಂದು ವಿದ್ಯಾಭ್ಯಾಸ ಪಡೆಯುತ್ತಿದ್ದು, ಈ ಶಾಲೆಯಲ್ಲಿ ಸುಮಾರು 110 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ಬರೆದಿದ್ದಾರೆ.

ದೂರದ ಗ್ರಾಮಗಳಿಂದ ಬರುವ ಹೆಣ್ಣು ಮಕ್ಕಳು ಗುಡ್ಡಗಾಡು ಪುದೇಶಗಳಿಂದ ಪ್ರತಿದಿನ ಶಾಲೆಗೆ ಬಂದು ಹೋಗುವುದು ಕಷ್ಟವಾಗುತ್ತಿರುವುದು ಗಮನಿಸಲಾಗಿದೆ, ಅದಲ್ಲದೆ ಸುತ್ತಮುತ್ತಲ ಗ್ರಾಮಗಳ ಮಕ್ಕಳಿಗೆ ಈ ಶಾಲೆಗೆ ಬರಲು ಇಷ್ಟವಿದ್ದರೂ ಸೂಕ್ತ ವಾಹನಗಳ ವ್ಯವಸ್ಥೆಗಳಿರುವುದಿಲ್ಲ ಜೊತೆಗೆ ತಂಗಲು ಯಾವುದೇ ವಸತಿ ನಿಲಯಗಳ ವ್ಯವಸ್ಥೆ ಇರುವುದಿಲ್ಲ. ಒಂದು ಸೂಕ್ತ ವಸತಿ ಶಾಲೆಯನ್ನು ನಿರ್ಮಿಸಿದರೆ ಈ ಶಾಲೆಯಲ್ಲಿನ ಮಕ್ಕಳ ಸಂಖ್ಯೆ ವೃದ್ಧಿಯಾಗುವುದರಲ್ಲಿ ಯಾವುದೇ ಸಂಶಯವಿರುವುದಿಲ್ಲ.

ಸರ್ಕಾರಿ ಪ್ರೌಢಶಾಲೆ ತೊರೆಹಡ್ಲುವಿನಲ್ಲಿ ಲಭ್ಯವಿರುವ ಜಾಗದಲ್ಲಿ ಒಂದು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಮಂಜೂರು ಮಾಡಿಸಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕಾಗಿ ಕೋರುತ್ತೇನೆ ಎಂದು ಆರತಿಕೃಷ್ಣರವರು ತನ್ನ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಯುನೈಟೆಡ್ ನೊಂದಿಗೆ ಮಾತನಾಡಿದ ಆರತಿಕೃಷ್ಣರವರು ಮಾನ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಭರವಸೆಯನ್ನು ಕೂಡ ನೀಡಿದ್ದಾರೆ, ಆದಷ್ಟು ಬೇಗ ತೊರೆಹಡ್ಲು ಭಾಗದ ಜನತೆಗೆ ಸಿಹಿ ಸುದ್ಧಿಯೊಂದು ನೀಡಲಿದ್ದೇವೆ ಎಂದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video