ಬೆಂಗಳೂರು

ಆರೋಗ್ಯ ಇಲಾಖೆ: ಬೆಳಿಗ್ಗೆ 10.00 ಗಂಟೆಗೆ ಕಛೇರಿಯ ಕರ್ತವ್ಯಕ್ಕೆ ಹಾಜರು, ರಾಜ್ಯ ಸರ್ಕಾರ ಖಡಕ್ ಆದೇಶ

ಬೆಂಗಳೂರು:- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳಡಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ತಪ್ಪದೇ ಬೆಳಿಗ್ಗೆ 10.00 ಗಂಟೆಗೆ ಕಛೇರಿಯ ಕರ್ತವ್ಯಕ್ಕೆ ಹಾಜರಾಗತಕ್ಕದ್ದು ಹಾಗೂ ಕಛೇರಿ ಅವಧಿಯಲ್ಲಿ ತಮ್ಮ ಸ್ವಸ್ಥಾನದಲ್ಲಿರಬೇಕು ಎಂಬುದಾಗಿ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳಡಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಬೆಳಿಗ್ಗೆ 10.00 ಗಂಟೆ ನಂತರವೇ ಕಛೇರಿಗೆ ಹಾಜರಾಗುತ್ತಿರುವುದು ಹಾಗೂ ಹಲವು ಸಿಬ್ಬಂದಿಗಳು ಸಂಜೆ 4.00/5.00 ಗಂಟೆಗೆ ಕಛೇರಿ ಬಿಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಇದರಿಂದಾಗಿ ಕಛೇರಿಯ ಕಾರ್ಯಗಳಿಗೆ ಅಡಚಣೆ ಉಂಟಾಗಿ ಸಕಾಲದಲ್ಲಿ ಸುಗಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳಡಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ತಪ್ಪದೇ ಬೆಳಿಗ್ಗೆ 10.00 ಗಂಟೆಗೆ ಕಛೇರಿಯ ಕರ್ತವ್ಯಕ್ಕೆ ಹಾಜರಾಗತಕ್ಕದ್ದು ಹಾಗೂ ಕಛೇರಿ ಅವಧಿಯಲ್ಲಿ ತಮ್ಮ ಸ್ವಸ್ಥಾನದಲ್ಲಿರಬೇಕು. ಕಛೇರಿಯ ಸಮಯಕ್ಕೆ ಹಾಜರಾಗದ ಸಿಬ್ಬಂದಿಗಳ ವಿರುದ್ಧ ನಿಯಂತ್ರಣಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಆಡಳಿತ ವಿಭಾಗಕ್ಕೆ ವರದಿ ಸಲ್ಲಿಸುವುದು ಸೂಚಿಸಲಾಗಿದೆ.

ಕಛೇರಿಗೆ ಹಾಜರಾಗುವ ವೇಳೆ ಹಾಗೂ ಬಿಡುವ ವೇಳೆಯನ್ನು ಮೊಬೈಲ್ ಆಧಾರಿತ KAMS ಅಪ್ಲಿಕೇಷನ್ ಮೂಲಕ ಹಾಜರಾತಿ ನಮೂದಿಸುವುದು ಕಡ್ಡಾಯವಾಗಿರುತ್ತದೆ ಹಾಗೂ ಕಛೇರಿ ಸಮಯದ ಪಾಲನೆ ಮಾಡದೇ ಇರುವ ಸಿಬ್ಬಂದಿಗಳ ವೇತನವನ್ನು Pro-rata ಆಧಾರದ ಮೇರೆಗೆ ಕಡಿತಗೊಳಿಸಲಾಗುವುದು. ಮುಂದುವರೆದು, ಮೇಲಾಧಿಕಾರಿಗಳ ಅನುಮತಿ ಇಲ್ಲದ ಗೈರು ಹಾಜರಾಗುವ ಹಾಗೂ ತಡವಾಗಿ ಹಾಜರಾಗುವ ಮತ್ತು ಕಛೇರಿ ಅವಧಿ ಪೂರ್ಣಗೊಳ್ಳುವ ಮನ್ನ ಹೊರಡುವ ಸಿಬ್ಬಂದಿಗಳ ವಿರುದ್ಧ ಯಾವುದೇ ಕಾರಣಕ್ಕೆ ಅವಕಾಶ ನೀಡದೇ ಶಿಸ್ತುಕ್ರಮ ಜರುಗಿಸಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video