ದಕ್ಷಿಣ ಕನ್ನಡ

ತಾನು ಗುರುತಿಸಿದ ಜಾಗದಲ್ಲಿ ಹೆಣ ಹೂತಿದ್ದು ನಿಜ ಎಂದ ಮಾಸ್ಕ್ ಮ್ಯಾನ್

ಮಂಗಳೂರು:- ಧರ್ಮಸ್ಥಳದಲ್ಲಿ ಈ ಹಿಂದೆ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಅನಾಮಿಕ ವ್ಯಕ್ತಿಯೊಬ್ಬ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿದ್ದು, ಅವುಗಳ ಶವಗಳನ್ನು ತಾನೇ ಹೂತಿದ್ದಾಗಿ ಹೇಳಿಕೊಂಡು ದೂರು ದಾಖಲಿಸಿದ್ದ, ದೂರಿನಲ್ಲಿ ಹೂತು ಹಾಕಿರುವ ಹೆಣಗಳ ಕಳೇಬರವನ್ನು ಸಹ ತೋರಿಸುವುದಾಗಿ ಉಲ್ಲೇಖಿಸಿದ್ದ. ಅದರ ಮೇರೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ತನಿಖೆಗೆ ಆದೇಶ ನೀಡಿದ್ದು, ಸದ್ಯ ಶೋಧ ಕಾರ್ಯ ಭರದಿಂದ ಸಾಗಿದೆ.

ಕೆಲವರು ಆರೋಪ ಮಾಡುತ್ತಿರುವ ಅನಾಮಿಕ ವ್ಯಕ್ತಿ ಸುಳ್ಳು ಎಂದೆಲ್ಲ ಟೀಕೆ ಮಾಡಿದ್ದರು. ಆದರೆ, ಗುರುತಿಸಿದ್ದ ಆರನೇ ಪಾಯಿಂಟ್‌ನಲ್ಲಿ ಹಾಗೂ ಬಂಗ್ಲ ಗುಡ್ಡದಲ್ಲಿ ಈತ ಹೇಳಿದೆಡೆ ಅಸ್ತಿಪಂಜರಗಳು ಪತ್ತೆಯಾದಾಗ ಪ್ರಕರಣ ತಿರುವು ಪಡೆದುಕೊಂಡಿತು. ಆದರೆ, ಈಗಲೂ ಸಹ ಅನೇಕರು ಈತನ ವಿರುದ್ಧ ಅನುಮಾನ ಹೊರಹಾಕುತ್ತಿದ್ದು, ಈತ ಮಾತ್ರ ತಾನು ಗುರುತಿಸಿದ್ದ ಜಾಗದಲ್ಲಿ ಹೆಣ ಹೂತಿದ್ದು ನಿಜ ಎಂದು ವಾದಿಸುತ್ತಿದ್ದಾನೆ.

ಈ ಕುರಿತು ಅನಾಮಿಕ ವ್ಯಕ್ತಿಯನ್ನು ಇಂಡಿಯಾ ಟುಡೇ ಸಂದರ್ಶನ ಮಾಡಿದ್ದು, ಈ ಸಂದರ್ಶನದಲ್ಲಿ ಈತ ತಾನು ಗುರುತಿಸಿದ ಜಾಗದಲ್ಲಿ ಹೆಣ ಹೂತಿದ್ದು ನಿಜ. ಆದರೆ, ತದನಂತರ ಆ ಜಾಗಗಳಲ್ಲಿ ಮಣ್ಣಿನ ಕೆಲಸಗಳು ನಡೆದಿರುವುದರಿಂದ ತುಸು ಗೊಂದಲ ಉಂಟಾಗಿದೆ ಎಂದಿದ್ದಾನೆ.

ಈ ಹಿಂದೆ ಇದ್ದ ದಾರಿಗಳಿಗೂ ಈಗ ಇರುವ ದಾರಿಗಳಿಗೂ ವ್ಯತ್ಯಾಸವಿದೆ. ಹೀಗಾಗಿ ಕೆಲ ಜಾಗಗಳು ಹೊಂದಾಣಿಕೆಯಾಗಿಲ್ಲ ಎಂದು ಮಾಸ್ಕ್‌ ಮ್ಯಾನ್‌ ಆರೋಪಿಸಿದ್ದಾನೆ. ಅಲ್ಲದೇ ಸಂದರ್ಶನದಲ್ಲಿ ನೇತ್ರಾವತಿ ಸ್ನಾನಘಟ್ಟ ಮಾತ್ರವಲ್ಲದೇ ಇನ್ನೂ ಹಲವು ಕಡೆ ಹೆಣಗಳನ್ನು ಹೂತಿದ್ದಾಗಿ ಹೇಳಿಕೊಂಡಿದ್ದಾನೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video